ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 30ನೇ ವರ್ಷದ ವಾರ್ಷಿಕ ಸಂಭ್ರಮೋತ್ಸವ ಪ್ರಯುಕ್ತ ಹಾಗೂ ಸರ್.ಎಂ.ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 30ನೇ ವರ್ಷದ ವಾರ್ಷಿಕ ಸಂಭ್ರಮೋತ್ಸವ ಪ್ರಯುಕ್ತ ಹಾಗೂ ಸರ್.ಎಂ.ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ ಅಂಗವಾಗಿ ಅಖಂಡ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ತೃತೀಯ ಆಂದೋಲನ ಎಂಬುದರ ಕುರಿತು ವಿಚಾರ ಸಂಕಿರಣ ಹಾಗೂ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಪ್ರತಿಷ್ಠಾನ ಟ್ರಸ್ಟ್ ನ
ಅಧ್ಯಕ್ಷರಾದ ರಮೇಶ್ ಸುರ್ವೆ ರವರ ಸಂಪಾದಕತ್ವದಲ್ಲಿ”ಬಹುಜನರ ಕವಿತೆಗಳು”,”ಹೊಯ್ಸಳರ ಆಯ್ದ ನೂರು ಮಕ್ಕಳ ಕಥೆಗಳು”ಎಂಬ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಬೆಂಗಳೂರಿನ ಕೆಂಪೇಗೌಡ ನಗರದ ಉದಯಭಾನು ಕಲಾಸಂಘದ ಆಡಿಟೋರಿಯಮ್
ಸಭಾoಗಣದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ ಗೌರವಾಧ್ಯಕ್ಷರಾದ ಬನ್ನೂರಿನ ಸಮಾಜ ಸೇವಕರು,ಬನ್ನೂರು ರೋಟರಿ ಸಂಸ್ಥೆಯ ಮಾಜಿಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತ್ತು.

ಇನ್ನು ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನ ಟ್ರಸ್ಟ್ ನ
ಅಧ್ಯಕ್ಷರಾದ ರಮೇಶ್ ಸುರ್ವೆ,ಚಿಪ್ಪಲಕಟ್ಟಿಯ ಗುರುಗಳಾದ ಶ್ರೀಕಲ್ಮೇಶ್ವರ ಸ್ವಾಮಿಗಳು,ಚಲನಚಿತ್ರಕಲಾವಿದರದ ಶಂಕರಭಟ್,ಶ್ರೀಮತಿ ಮೀನಾ,ಉಡುಪಿಯ ರಮಾನಂದ ಗುರೂಜಿ,ಮಾಜಿ ಶಾಸಕರಾದ ಡಾ.ನೆ.ಲ.
ನರೇಂದ್ರ ಬಾಬು,ಡಾ.ಶಂಕರಗೌಡ ಮಾಲಿಪಾಟೀಲ್,ಡಾ.ಸತೀಶ್ ಎಸ್.ಹೊಸಮನಿ,ಶ್ರೀ ಮಾರ್ಕಂಡಪುರಂ ಶ್ರೀನಿವಾಸ್,ಅಶೋಕ್ ನರೋಡೆ, ಎಸ್.ವಿ.ಪಾಟೀಲ್ ಗುಂಡೂರು,ರವರು ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.

ಇದೆ ವೇಳೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ ವಿವಿಧ ಪ್ರಶಸ್ತಿಗಳಾದ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯಪ್ರಶಸ್ತಿ,ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭವನ ಪ್ರಶಸ್ತಿ, ರಾಷ್ಟ್ರೀಯ ವೈದ್ಯರತ್ನ ರಾಷ್ಟ್ರ ಪ್ರಶಸ್ತಿ,ರಾಷ್ಟ್ರೀಯ ಕಣ್ಮಣಿ ರಾಷ್ಟ್ರಪ್ರಶಸ್ತಿ,ರಾಷ್ಟ್ರೀಯ ವಾಸ್ತುರತ್ನ ರಾಷ್ಟ್ರಪ್ರಶಸ್ತಿ,ರಾಷ್ಟ್ರೀಯ ವಿಭೂಷಣ ರಾಷ್ಟ್ರಪ್ರಶಸ್ತಿ,ಕರ್ನಾಟಕ ವಿಭೂಷಣ ರಾಜ್ಯಪ್ರಶಸ್ತಿ,ಕರ್ನಾಟಕ ಶಿಕ್ಷಣ ರತ್ನರಾಜ್ಯಪ್ರಶಸ್ತಿ, ಕಲ್ಯಾಣ ಕರ್ನಾಟಕ ರತ್ನರಾಜ್ಯಪ್ರಶಸ್ತಿ,ಕರ್ನಾಟಕ ಪರಿಸರ ರತ್ನರಾಜ್ಯಪ್ರಶಸ್ತಿ,ಕರ್ನಾಟಕ ಸಹಕಾರ ರತ್ನರಾಜ್ಯಪ್ರಶಸ್ತಿ,ಹಾಗೂ ರಾಷ್ಟ್ರೀಯ ವಿಕಾಸರತ್ನ ಆದರ್ಶದಂಪತಿ ರಾಷ್ಟ್ರಪ್ರಶಸ್ತಿ ಗಳನ್ನು ವಿವಿಧ ಕ್ಷೇತ್ರಗಳಲ್ಲಿ, ಹಲವಾರು ಸಮಾಜಮುಖಿ
ಕ್ಷೇತ್ರದಲ್ಲಿ ಸಾಧನೆಗೈಯ್ದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಗೌರವಿಸಲಾಯಿತ್ತು.

ಇದೆ ಸಂದರ್ಭದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರ ನಿರಂತರ ಸಮಾಜಸೇವೆಯನ್ನು ಗುರುತ್ತಿಸಿ ಪ್ರಶಸ್ತಿನೀಡಿ ಸನ್ಮಾನಿಸಿ ಗೌರವಿಸಲಾಯಿತ್ತು.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಗೌರವಾಧ್ಯಕ್ಷರಾದ ಡಾ.ಕೆ.ಮಹೇಂದ್ರಸಿಂಗ್ ಕಾಳಪ್ಪ ನವರು ಮಾತನಾಡಿ ಇಂದು ಈ ಕಾರ್ಯಕ್ರಮವನ್ನು ರಮೇಶ್ ಸುರ್ವೆಯವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ ರಮೇಶ್ ಸುರ್ವೆ ಯವರು ಅನೇಕ ಕಷ್ಟಗಳನ್ನು ಎದುರಿಸಿ ಈ ಟ್ರಸ್ಟ್ ನ್ನು 30 ವರ್ಷಕ್ಕೆತಂದಿದ್ದಾರೆ.ನಾನು ಇಂದು ಈ ಟ್ರಸ್ಟ್ ನ ಗೌರವಾಧ್ಯಕ್ಷರಾಗಲು
ಕಾರಣನೇ ರಮೇಶ್ ಸುರ್ವೆ ಯವರು.ನಮ್ಮ
ತಂದೆ ತಾಯಿಯ
ಆಶೀರ್ವಾದದಿಂದ ಸಮಾಜಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ.ಅದರಂತೆ ನನ್ನನ್ನು ಗುರುತ್ತಿಸಿ ಗೌರವಾಧ್ಯಕ್ಷನಾಗಿ ಮಾಡಿ ಸನ್ಮಾನಿಸುತ್ತಿರುವುದು ನನಗೆ ತುಂಬಾನೇ ಖುಷಿ ತಂದಿದ್ದೆ ಎಲ್ಲಾರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೆನೆ ಎಂದ್ದರು.ಹಾಗೂ ಹಿರಿಯ ಚಲನಚಿತ್ರ ಕಲಾವಿದರಾದ ಶಂಕರ್ ಭಟ್ ಹಾಗೂ ಮಾಜಿಶಾಸಕರಾದ ನೆ.ಲ.ನರೇಂದ್ರಬಾಬು ರವರು ಕೂಡ ಮಾತನಾಡಿದ್ದರು.

Leave a Reply

Your email address will not be published. Required fields are marked *

You cannot copy content of this page