ಮೈಸೂರು ನಗರ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ
ಓಂ ಶ್ರೀ ಸಾಯಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಯಾದ
*ಡಾ. ರಾಣಿ ಪ್ರಭ . ಹೆಚ್. ಪಿ* ಅವರು ಸಾಕಷ್ಟು ಬಡ ಹೆಣ್ಣು ಮಕ್ಕಳಿಗೆ ಶೈಕ್ಷಣಿಕವಾಗಿ , ಆರ್ಥಿಕ ವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ..
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹೆಣ್ಣುಮಕ್ಕಳನ್ನು ಸಂಘಟಿಸಿ, ಅವರಿಗೆ ಪ್ರೇರೇಪಣೆ ನೀಡಿ, ಶೈಕ್ಷಣಿಕವಾಗಿ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ,
ಮೈಸೂರಿನ ದಟ್ಟಗಳ್ಳಿಯಲ್ಲಿ ಉಚಿತ ಊಟ ವಸತಿ, ಒದಗಿಸಿ ಪ್ರತಿಷ್ಠಿತ ಆಸ್ಪತ್ರೆಗಳಿಗೆ , ನರ್ಸಿಂಗ್ ತರಭೇತಿ ನೀಡಿ ಉದ್ಯೋಗ ಕಲ್ಪಿಸಿದ್ದಾರೆ,
ಜನಪರ, ಸಮಾಜಮುಖಿ ಕಾರ್ಯಗಳಿಗೆ, ಮಹಿಳಾ ಸಬಲೀಕರಣಕ್ಕಾಗಿ ತುಡಿಯುತ್ತಿರುವ ರಾಣಿ ಪ್ರಭ ಅವರನ್ನು ಸಾಕಷ್ಟು ಸಂಘ ಸಂಸ್ಥೆಗಳು ಗೌರವಿಸಿ , ಸನ್ಮಾನಿಸಿ , ಪ್ರಶಸ್ತಿಗಳನ್ನು ನೀಡಿದ್ದಾರೆ ..
ಅವರು ಅಕ್ಟೋಬರ್ ೨೭ ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಅವರ ಹುಟ್ಟುಹಬ್ಬಕ್ಕೆ ಅವರ ವಿಧ್ಯಾರ್ಥಿಗಳು , ಮತ್ತು ಸ್ನೇಹಿತರು ರಾಣಿ ಪ್ರಭ ಅವರು ಇನ್ನಷ್ಟು ಸಾಮಾಜಿಕ ಕಾರ್ಯ ಗಳಲ್ಲಿ ತೊಡಗಿಕೊಳ್ಳಲಿ ಮತ್ತು ರಾಜಕೀಯವಾಗಿ ,ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಶುಭಕೋರಿದ್ದಾರೆ..