ಅಭಿನಯ ಭಾರ್ಗವ,ಕರ್ನಾಟಕ ದ ಸುಪುತ್ರ,ಕರ್ನಾಟಕ ರತ್ನ,
ಸಾಹಸಸಿಂಹ
ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಸಮಾಜದಲ್ಲಿ ನಿರಂತರವಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರುವ ಬನ್ನೂರಿನ ಸಮಾಜ ಸೇವಕರು,ಬನ್ನೂರು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ರವರನ್ನು ಗುರುತಿಸಿ ಇಂದು ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬದ ಅಂಗವಾಗಿ ಡಾ.ವಿಷ್ಣು ಸೇನಾ ಸಮಿತಿ ಮತ್ತು ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘದ ವತಿಯಿಂದ “ಡಾ.ವಿಷ್ಣುವರ್ಧನ್ ಸೇವಾ ಪ್ರಶಸ್ತಿ ಪ್ರದಾನ”ಮಾಡಿ ಸನ್ಮಾನಿಸಿ ಗೌರವಿಸಲಾಯಿತ್ತು.
ಮೈಸೂರಿನ ಚಾಮುಂಡಿಪುರಂ ನ ಅಪೂರ್ವ ಸಭಾಂಗಣದಲ್ಲಿ ಇಂದು ಡಾ.ವಿಷ್ಣು ಸೇನಾ ಸಮಿತಿ ಮತ್ತು ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಸಮಾಜ ಸೇವೆಯಲ್ಲಿ ಗಣನೀಯವಾಗಿ ಸೇವೆಸಲ್ಲಿಸಿದ್ದ 8 ಮಂದಿ ವಿಷ್ಣುವರ್ಧನ್ ಅಭಿಮಾನಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತ್ತು.
ಇನ್ನು ಹೆಚ್.ಡಿ. ಕೋಟೆ ತಾಲ್ಲೂಕಿನ ಮಾದಾಪುರದ ಸಿದ್ದರಾಜು,ತಿ.ನರಸೀಪುರದ
ಶಿವು,ಮಂಡ್ಯದ ಹೊಸಳ್ಳಿಯ ರಾಮಕೃಷ್ಣ,ದೂರದ ಸೋಮಶೇಖರ್,ಹೆಚ್.ಡಿ. ಕೋಟೆಯ ಸಮೀವುಲ್ಲಾ, ಮೈಸೂರಿನ ಮುಬಾರಕ್,ಸಿದ್ದಪ್ಪ ಚಿನ್ನ ಬೆಳ್ಳಿ,ರವರುಗಳನ್ನು ಗುರುತಿಸಿ “ಡಾ.ವಿಷ್ಣುವರ್ಧನ್ ಸೇವಾ ಪ್ರಶಸ್ತಿ ಪ್ರದಾನ” ಮಾಡಿ ಸನ್ಮಾನಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ಎಂ.ಡಿ. ಪಾರ್ಥಸಾರಥಿ,ಇಳ್ಳೈಆಳ್ವಾರ್ ಸ್ವಾಮೀಜಿ,ಹಿರಿಯ ಸಮಾಜ ಸೇವಕರಾದ ಡಾ.ಕೆ.ರಘುರಾಮ್ ವಾಜಪೇಯಿ,ಕಾಂಗ್ರೇಸ್ ಮುಖಂಡರಾದ ಎನ್.ಎಂ.ನವೀನ್ ಕುಮಾರ್,ಬಿಜೆಪಿ ಮುಖಂಡರಾದ ಸಂದೇಶ್ ಸ್ವಾಮಿ,ಕಡಕೊಳ ಜಗದೀಶ್,ಕೆ. ಆರ್.ಬ್ಯಾಂಕಿನ ಉಪಾಧ್ಯಕ್ಷ ರಾದ ಬಸವರಾಜ್ ಬಸಪ್ಪ,ಜೀವಾಧರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್,ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ
ಅಧ್ಯಕ್ಷರಾದ ಸಿ.ಜಿ.ಗಂಗಾಧರ್,ಹೋಟೆಲ್ ಮಾಲೀಕರ ಸಂಘದ
ಅಧ್ಯಕ್ಷರಾದ ನಾರಾಯಣ ಗೌಡ್ರು,ಅಪೂರ್ವ ಹೋಟೆಲ್ ನ ಮುಖ್ಯಸ್ಥರದ ಅಪೂರ್ವ ಸುರೇಶ್, ಎಂ.ಸಿ.ರಮೇಶ್,ಯುವ ಮುಖಂಡರಾದ ವಿಕ್ರಂ ಐಯ್ಯಂಗಾರ್,ನವೀನ್ ಕೆಂಪಿ,ಹರೀಶ್ ನಾಯ್ಡು ರವರು ಸೇರಿದಂತೆ ಮೈಸೂರಿನ ಎಲ್ಲಾ ಅಭಿಮಾನಿಗಳು ಹಾಜರಿದ್ದರು.