ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಗುರುವಾರ (ಡಿ.26) ರಾತ್ರಿ ನಿಧನರಾಗಿದ್ದಾರೆ.
2004-2014 ವರೆಗೆ ಭಾರತದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ್ದ 92 ವರ್ಷದ ಮನಮೋಹನ ಸಿಂಗ್ ಅವರ ಬಗೆಗಿನ ಹಲವು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಮಾಜಿ ಮನಮೋಹನ್ ಸಿಂಗ್ ಅವರು ಭಾರತದ 13ನೇ ಪ್ರಧಾನಿಯಾಗಿ ಸತತ ಎರಡು ಬಾರಿ 10 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದರು.
ಸಿಂಗ್ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಗ್ರೇಟ್ ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು.
1970ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹಾ ಉದ್ಯೋಗ ಅಲಂಕರಿಸಿದ ಅವರು, ಮಾಜಿ ಪ್ರಧಾನಮಂತ್ರಿ ನರಸಿಂಹ ರಾವ್ ಅವರ ಆರ್ಥಿಕ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದರು.
ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ 1972 ರಲ್ಲಿ ಬಡ್ತಿ ಪಡೆದರು. UNCTAD ಸೆಕ್ರೆಟರಿಯೇಟ್‌ನಲ್ಲಿ ಅವರನ್ನು ದಕ್ಷಿಣ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.
1990 ರಿಂದ ಹಣಕಾಸು ಸಚಿವಾಲಯದ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಸ್ಥಾನಗಳನ್ನು ಸಹ ನಿರ್ವಹಿಸಿದ್ದರು.
ಮೇ 2004 ರ ಸಂಸತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಪ್ರಧಾನಿಯಾಗಿ ಮೊದಲ ಬಾರಿಗೆ ಹುದ್ದೆ ಅಲಂಕರಿಸಿದರು.
2005 ರಲ್ಲಿ ಅಮೇರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯೂ, ಬುಷ್ ಅವರೊಂದಿಗೆ ಪರಮಾಣು ಸಹಕಾರ ಒಪ್ಪಂದದ ಕುರಿತಾಗಿ ಮಾತುಕತೆ ನಡೆಸಿದರು.
ಮೇ 2009 ರ ಮನಮೋಹನ ಸಿಂಗ್ ಅವರು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
2014 ರ ಆರಂಭದಲ್ಲಿ ತಾವು ಮೂರನೇ ಅವಧಿಗೆ ಪ್ರಧಾನಿಯಾಗಲು ಒಪ್ಪಲಿಲ್ಲ. ಮೇ 26ರಂದು ಬಿಜೆಪಿಯ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದರು.
ಅಣ್ಣಾಸಾಹೇಬ್ ಚಿರ್ಮುಲೆ ಪ್ರಶಸ್ತಿಯನ್ನು ಡಬ್ಲ್ಯು.ಎಲ್.ಜಿ. ಅಲಿಯಾಸ್ ಅಣ್ಣಾಸಾಹೇಬ್ ಚಿರ್ಮುಲೆ ಟ್ರಸ್ಟ್, ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ಲಿಮಿಟೆಡ್, ಸತಾರಾ, ಮಹಾರಾಷ್ಟ್ರದಿಂದ ನೀಡಿತ್ತು. 1999 ಮನಮೋಹನ್ ಸಿಂಗ್ ಅವರು ಶ್ರೇಷ್ಠತೆಗಾಗಿ ಎಚ್‌ಎಚ್ ಕಂಚಿ ಶ್ರೀ ಪರಮಾಚಾರ್ಯ ಪ್ರಶಸ್ತಿಯನ್ನು ಪಡೆದರು. 1999 ಮನಮೋಹನ್ ಸಿಂಗ್ ಅವರು ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಬರಲ್ ಸೈನ್ಸಸ್ ನವದೆಹಲಿಯ ಫೆಲೋ ಪಡೆದರು.
ಮನಮೋಹನ್ ಸಿಂಗ್ ಅವರು 1964 ರಲ್ಲಿ ಇಂಡಿಯಾಸ್ ಎಕ್ಸ್‌ಪೋರ್ಟ್ ಟ್ರೆಂಡ್ಸ್ ಮತ್ತು ಪ್ರಾಸ್ಪೆಕ್ಸ್ ಫಾರ್ ಸೆಲ್ಫ್- ಸಸ್ಟೈನ್ಸ್ ಗೋತ್ ಎಂಬ ಪುಸ್ತಕವನ್ನು ಬರೆದರು. ಅವರು ಅರ್ಥಶಾಸ್ತ್ರದ ನಿಯತಕಾಲಿಕಗಳ ಶ್ರೇಣಿಯಲ್ಲಿ ಪ್ರಕಟವಾದ ಅನೇಕ ಲೇಖನಗಳನ್ನು ಸಹ ಅವರ ವೃತ್ತಿ ಜೀವನದಲ್ಲಿ ಬರೆಯುವ ಮೂಲಕ ದೇಶದ ಆರ್ಥಿಕತೆಗೆ ಸಹಕಾರಿಯಾಗುವ ವಿಷಯಗಳನ್ನು ಹಂಚಿ ಹೋದರು.