ವಿಶ್ವ ಪರಿಯಾಟನೆ ಮಾಡಿ ಪರಿಸರದ ಬಗ್ಗೆ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜಸ್ಥಾನದ ಭಾಡ್ ಮೇರ್ ಜಿಲ್ಲಾಯ ಲಂಗೇರ್ ನ
“ನಾರ್ ಪತ್ ರಾಜ್ ಪುರೋಹಿತ್”ರವರು ಸೈಕಲಿಂಗ್ ಜಾಥಾವನ್ನು ಜಮ್ಮು ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ ಸೈಕಲಿಂಗ್ ಜಾಥಾಮಾಡು ವುದರ ಮೂಲಕ ವಿಶ್ವ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಅವರನ್ನು ಬನ್ನೂರಿನ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ರವರು ಮೈಸೂರಿನ ಕೊಲಂಬಿಯಾಆಸ್ಪತ್ರೆಯ ಬಳಿ ಹೂಗುಚ್ಛ ನೀಡಿ ಮೈಸೂರಿನ ಹೆಸರಾಂತ ಗುರು ಸ್ವೀಟ್ ನ ಸಿಹಿಯನ್ನು ತಿನ್ನಿಸುವುದರ ಮೂಲಕ ಅತ್ಮಿಯವಾಗಿ ಬರಮಾಡಿಕೊಂಡರು.
ನಂತರ ಮೈಸೂರಿನ ಇಟ್ಟಿಗೆಗೂಡಿನ ಶ್ರೀ ರಾಜಸ್ಥಾನ ವಿಷ್ಣು ಸೇವಾ ಟ್ರಸ್ಟ್ ಮತ್ತು ರಾಜ್ ಪುರೋಹಿತ್ ಸಮಾಜದ ವತಿಯಿಂದ ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ನವರ ನೇತೃತ್ವದಲ್ಲಿ ನಾರ್ ಪತ್ ಸಿಂಗ್ ರಾಜ್ ಪುರೋಹಿತ್ ರವರನ್ನು ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತ್ತು.
ಇದೆ ಸಂದರ್ಭದಲ್ಲಿ ಶ್ರೀ ರಾಜಸ್ಥಾನ ವಿಷ್ಣು ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರ ಸಿಂಗ್ ರಾಜ್ ಪುರೋಹಿತ್,ಖಜಾಂಚಿ ಕಪೂರ್ ಚಂದ್ ಸೇನ್,ರಾಜ್ ಪುರೋಹಿತ್ ಸಮಾಜ ಮೈಸೂರುನ ಅಧ್ಯಕ್ಷರಾದ ಹಪೂಸಿಂಗ್ ರಾಜ್ ಪುರೋಹಿತ್,ಕಾರ್ಯದರ್ಶಿ ಮಂಗಳ್ ಸಿಂಗ್ ಜಾಗರ್ ವಲ್,ಸಧ್ಯಸರುಗಳಾದ ಮೊಡಾ ರಾಮ್ ರಾಜ್ ಪುರೋಹಿತ್,ನಾಥರಾಮ್ ರಾಜ್ ಪುರೋಹಿತ್,ಶಿವು ರಾಮ್ ಸುತರ್,ಜನಕ್ ಸಿಂಗ್ ಭಾಟಿಯ ರವರು ಸೇರಿದಂತೆ ಮತೀತರರು ಉಪಸ್ಥಿತರಿದ್ದರು.
ಬಳಿಕ ಬನ್ನೂರಿನ ಪರಿಸರ ಜಾಗೃತಿ ವೇದಿಕೆಯ
ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ನವರು ಮಾತನಾಡಿ ನಮ್ಮ ಸಮಾಜದ ನಾರ್ ಪಥ್ ಸಿಂಗ್ ರಾಜ್ ಪುರೋಹಿತ್ ರವರು ಈ ವರೆಗೆ 21,450 ಕಿಲೋಮೀಟರ್ ಗಳನ್ನು ಸೈಕಲ್ ಮೂಲಕ ಜಾಥನಡೆಸಿ ಪರಿಸರದ ಬಗ್ಗೆ ಪ್ರಾಣಿ ಪಕ್ಷಿಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.ಹೀಗಾಗಲೇ ಇವರು ಜಮ್ಮು ಕಾಶ್ಮೀರ, ಉತ್ತರ್ ಪ್ರದೇಶ,ಮಧ್ಯ ಪ್ರದೇಶ,ರಾಜಸ್ಥಾನ,ಪುಣೆ,ಕೇರಳ ತಮಿಳುನಾಡು,ಕರ್ನಾಟಕ,ಸೇರಿದಂತೆ ಅನೇಕ ರಾಜ್ಯಗಳನ್ನು ಸುತ್ತಿ ಪರಿಸರಕ್ಕೆ ಮತ್ತು ನಮ್ಮ ಸಮಾಜಕ್ಕೆ,ನಮ್ಮನಾಡಿಗೆ,
ರಾಜ್ಯಕ್ಕೆ,ದೇಶಕ್ಕೆ ಹೆಮ್ಮೆ ತರುವಂತಹ ಕಾರ್ಯವನ್ನು ಮಾಡಿದ್ದಾರೆ ಇವರ ಮೂಲ ಉದ್ದೇಶ ಪರಿಸರಕ್ಕೆ ಪ್ರಾಣಿ ಪಕ್ಷಿಗಳಿಗೆ ಯಾವುದೇ ರೀತಿಯ ಹಾನಿಯಾಗಬಾರದು ಅವುಗಳನ್ನು ಸಂರಕ್ಷಿಸಬೇಕೆಂಬುದೇ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಂತೆಯೇ ಇದೆ ವೇಳೆ ಶ್ರೀರಾಜಸ್ಥಾನ ವಿಷ್ಣುಸೇವಾಟ್ರಸ್ಟ್ ನ
ಅಧ್ಯಕ್ಷರಾದ ಹಪೂ ಸಿಂಗ್ ರಾಜ್ ಪುರೋಹಿತ್ ರವರು ಮಾತನಾಡಿದ್ದರು.