ಲೋಹಿತ್ ಹನುಮಂತಪ್ಪ: 2019 ರಲ್ಲಿ ಕುಸಿದಿದ್ದ ಅಗ್ನಿಶಾಮಕ ಠಾಣೆ ಸ್ವಾಗತ ಕಮಾನು ಜಾಗಕ್ಕೆ ಸಂಸದ ಯದುವೀರ್ ಭೇಟಿ. 2019ರಲ್ಲಿ ವರುಣನ ಆರ್ಭಟಕ್ಕೆ ಸರಸ್ವತಿಪುರಂ ಬಳಿ ಇರುವ ಅಗ್ನಿಶಾಮಕ ಠಾಣೆ ಕಟ್ಟಡದ ಮುಂಭಾಗದ ಸ್ವಾಗತ ಕಮಾನು ಧರೆಗುರುಳಿದಿತ್ತು, ಠಾಣೆಯ ಕಟ್ಟಡ ಶಿಥಿಲಗೊಂಡಿದ್ದರಿಂದ ಈ ಘಟನೆ ನಡೆದಿತ್ತು ಅದೃಷ್ಟವಶಾತ್ ಕಟ್ಟಡ ಕೆಳಗೆ ಯಾರೂ ಇಲ್ಲದ್ದರಿಂದ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
ಸರಸ್ವತಿಪುರಂ ಬಳಿ ಇರುವ ಈ ಅಗ್ನಿಶಾಮಕ ಠಾಣೆ ಪಾರಂಪರಿಕ ಕಟ್ಟಡ. 100 ವರ್ಷದ ಇತಿಹಾಸ ಕಟ್ಟಡಕ್ಕಿದೆ ಇದಕ್ಕೆ ಕಾಯಕಲ್ಪ ಕಲ್ಪಿಸಲು ಅಧಿಕಾರಿಗಳೊಂದಿಗೆ ಇಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರೀಶಿಲನೆ ನಡೆಸಿದರು,
ಅಗ್ನಿಶಾಮಕ ದಳದ ತುರ್ತು ಪ್ರಕ್ರಿಯೆಗಳ ಸಿದ್ಧತೆಗಳನ್ನು ಪರಿಶೀಲಿಸಿ, ಪಾರಂಪರಿಕ ಅಗ್ನಿಶಾಮಕ ಕಟ್ಟಡದ ರಕ್ಷಣೆ ಹಾಗು ಅದನ್ನು ಪುನಃಸ್ಥಾಪಿಸುವ ಯೋಜನೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು, ಸಂಸದರಿಗೆ ಅಧಿಕಾರಿಗಳು ಸಾತ್ ನೀಡಿದ್ದಾರೆ.