ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸಶಕ್ತಿಕರಣಕ್ಕೆ ಬೆಂಬಲವಾಗಿ ನಿಂತಮಾಜಿ ಪಾಲಿಕೆ ಸದಸ್ಯ ಕೆ.ವಿ ಶ್ರೀಧರ್

ಲೋಹಿತ್ ಹನುಮಂತಪ್ಪ
ಮೈಸೂರು : ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಆಯ್ದ 10 ಮಹಿಳಾ ಸಂಘ ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹವನ್ನು ನೀಡುವ ಮುಖಾಂತರ ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸಶಕ್ತಿಕರಣಕ್ಕೆ ಬೆಂಬಲವಾಗುವೆಡೆಗೆ ಹಾಗೂ ಹಲವಾರು ಮಹಿಳಾ ಸಂಘಟನೆಗಳ ದೃಷ್ಟಿಕೋನಗಳನ್ನು ಪ್ರೋತ್ಸಾಹಿಸುವುದು, ಶಿಕ್ಷಣ , ಅರಿವು, ಸಾಕ್ಷರತೆ , ಸಮಾಜದಲ್ಲಿ ಸಮಾನ ಸ್ಥಾನಮಾನ, ಉತ್ತಮ ಜೀವನೋಪಾಯ ಮತ್ತು ಸಣ್ಣ ಕೈಗಾರಿಕಾ ತರಬೇತಿ ಏರ್ಪಡಿಸುವುದರ ಮೂಲಕ ಮಹಿಳೆಯರ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತ ಬಂದಿರುವ ಕೆ.ವಿ. ಶ್ರೀಧರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ

ಇತ್ತೀಚೆಗೆ ಭಾರತದಲ್ಲಿ ಮಹಿಳೆಯರು ಶಿಕ್ಷಣ, ರಾಜಕೀಯ, ಮಾಧ್ಯಮ, ಕಲೆ, ಸಾಂಸ್ಕೃತಿಕ, ಸೇವಾ ವಿಭಾಗಗಳು, ವಿಜ್ಞಾನ ಮತ್ತು ತಾಂತ್ರಿಕ ಇತ್ಯಾದಿ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ ಮಹಿಳಾ ಸಬಲೀಕರಣವು ಮಹತ್ವದ ವಿಷಯವಾಗಿದೆ ಆರ್ಥಿಕ ಸಬಲೀಕರಣವು ಮಹಿಳೆಯರಿಗೆ ಸಂಪನ್ಮೂಲಗಳು, ಸ್ವತ್ತುಗಳು ಮತ್ತು ಆದಾಯವನ್ನು ನಿಯಂತ್ರಿಸಲು ಮತ್ತು ಅದರ ಲಾಭ ಪಡೆಯಲು ನೆರವಾಗುತ್ತದೆ ಈ ಎಲ್ಲಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನವಭಾರತ್ ನಿರ್ಮಾಣ ಸೇವಾ ಟ್ರಸ್ಟ್ ವತಿಯಿಂದ ಆಯ್ದ ಮಹಿಳಾ ಸಂಘ ಸಂಸ್ಥೆಗಳನ್ನು ಗುರುತಿಸಿ ಆ ಸಂಘಟನೆಗಳಿಗೆ ಪ್ರತಿವರ್ಷ 10,000/- ಗಳ ಪ್ರೋತ್ಸಾಹ ಧನವನ್ನು (ಚೆಕ್) ನೀಡುವುದರ ಮುಖಾಂತರ ಅವರನ್ನು ಪ್ರೋತ್ಸಾಹಿಸಲಾಯಿತು

ಹಾಗೂ ಅವರು ಆರ್ಥಿಕವಾಗಿ ಮುಂದುವರಿಯಲು ಇಚ್ಚಿಸಿದ್ದಲ್ಲಿ ಅಂತವರಿಗೆ ಸಣ್ಣ ಕೈಗಾರಿಕಾ ತರಬೇತಿಯನ್ನು ಕೊಡಿಸುವುದು ಮತ್ತು ಕೈಗಾರಿಕಾ ಸ್ಥಾಪನೆಗಾಗಿ ಆರ್ಥಿಕವಾಗಿ ಸದೃಢಗೊಳಿಸಲು ಲೋನ್ ವ್ಯವಸ್ಥೆಯನ್ನು ಕಲ್ಪಿಸುವುದು ಸಣ್ಣ ಕೈಗಾರಿಕಾ ಘಟಕ ಗಳನ್ನು ಸ್ಥಾಪಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸುವುದು ಹಾಗೂ ಮತ್ತಿತರ ಅನುಕೂಲಕರವಾದ ವ್ಯವಸ್ಥೆಯನ್ನು ಕಲ್ಪಿಸುವುದು
ನವಭಾರತ್ ನಿರ್ಮಾಣ ಸೇವಾ ಟ್ರಸ್ಟ್ ಧ್ಯೇಯವಾಗಿದೆ

ಈ ಕಾರ್ಯಕ್ರಮದ ಮುಖ್ಯ ರೋವಾರಿ
ಶ್ರೀಧರ್ ಕೆ.ವಿ ,
ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರು ಹಾಗೂ ನವ ಭಾರತ್ ನಿರ್ಮಾಣ ಸೇವಾ ಟ್ರಸ್ಟ್ ಅಧ್ಯಕ್ಷರು,

Leave a Reply

Your email address will not be published. Required fields are marked *

You cannot copy content of this page