ಮಹಾರಾಜ ಕಾಲೇಜು ಮೈದಾನದಲ್ಲಿ ಇಂದಿನಿಂದ ಡಿಸೆಂಬರ್ ೧೦ ರಿಂದ ೧೯ , ೦೯ ದಿನಗಳ ಕಾಲ ಆಯೋಜಿಸಿರುವ ಗೃಹಶೋಭೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ವಿ ರಾಜೀವ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಡಿಸೆಂಬರ್ 10 ರಿಂದ ೧೯ ರವರೆಗೆ ಗೃಹಶೋಭೆ ಆಯೋಜಿಸಿದ್ದು, ಫರ್ನೀಚರ್ಸ್, ಗೃಹೋಪಯೋಗಿ ವಸ್ತುಗಳು, ಸೋಲಾರ್ ಪದಾರ್ಥ, ಬಟ್ಟೆಗಳು ಸೇರಿದಂತೆ ಮತ್ತಿತರೆ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದ್ದು, ದೊಡ್ಡ ಮಹಲ್‍ಗಳಲ್ಲಿನ ದರಕ್ಕಿಂತ ಕಡಿಮೆ ದರದಲ್ಲಿ ದೊರೆಯಲಿವೆ.
ಕೋವಿಡ್ ಹಿನ್ನಲೆಯಲ್ಲಿ ಎಲ್ಲಾ ವ್ಯಾಪಾರ ವ್ಯವಹಾರ ಸ್ಥಗಿತಗೊಂಡಿತ್ತು ಆದ್ದರಿಂದ ಈ ರೀತಿಯ ಕಾರ್ಯಕ್ರಮಗಳು ಸಾಧ್ಯವಾಗಿರಲಿಲ್ಲ , ಜನರಿಗೂ ಮತ್ತು ವ್ಯಾಪಾರಸ್ಥರಿಗೂ ಅನುಕೂಲ ವಾಗಲಿದೆ, ಈ ಬಾರಿ ೧೧ ಕೇಕ್ ಶೋ ಏರ್ಪಡಿಸಿದ್ದು , ವರನಟ ಡಾ, ರಾಜ್‌ಕುಮಾರ್ , ನಮ್ಮೆಲ್ಲರ ಪ್ರೀತಿಯ ಅಪ್ಪುವಿನ ಕಲಾಕೃತಿಯನ್ನು ಕೇಕ್ ನಲ್ಲಿ ಮಾಡಿರುವುದು ವಿಶೇಷವಾಗಿದೆ,
ಹಾಗಾಗಿ ಮೈಸೂರು ಸುತ್ತಮುತ್ತಲಿನ ನಿವಾಸಿಗಳು ಗೃಹಶೋಭೆಗೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಇದೆ ಸಂಧರ್ಭದಲ್ಲಿ ಗೃಹಶೋಭೆಯ ಆಯೋಜಕರಾದ ನಾಗಚಂದ್ರ ಮಾತನಾಡಿ ಕೋವಿಡ್ ನಿಯಮವಳಿ ಗಳನ್ನ ಪಾಲಿಸಿಕೊಂಡು , ಡಿಸೆಂಬರ್ ೧೦ ರಿಂದ ೧೯ ರವರೆಗೆ ಗೃಹಶೋಭೆಯನ್ನು ಆಯೋಜಿಸಲಾಗಿದೆ ಎಂದು ಮೇಳಾದ ಮಾಹಿತಿ ನೀಡಿದರು.