ಗ್ರಾಮೀಣ ಪ್ರತಿಭೆ ಗುರುತಿಸಲು ಕ್ರೀಡಾ ಕೂಟ ಸಹಕಾರಿ ಶಾಸಕ ಜಿ.ಟಿ.ದೇವೇಗೌಡ

ಗ್ರಾಮೀಣ ಪ್ರದೇಶ ಮಕ್ಕಳ ಪ್ರತಿಭೆ ಗುರುತಿಸಲು ಶಾಲಾ ಹಂತದ ಕ್ರೀಡಾ ಕೂಟ ಸಹಕಾರಿಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಅವರು ಇಂದು ಚಾಮುಂಡೇಶ್ವರಿ ಕ್ಷೇತ್ರದ ದೂರ ಗ್ರಾಮದಲ್ಲಿರುವ ಶ್ರೀ ಮಹದೇಶ್ವರ ವಿದ್ಯಾ ಸಂಸ್ಥೆಯಲ್ಲಿ ನಡೆದ ಜಯಪುರ ಹೋಬಳಿ ಮಟ್ಟದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ಕೂಟಗಳಿಂದ ವಿದ್ಯಾರ್ಥಿಗಳ ನಡುವೆ ಸಹೋದರ ಸಂಬಂಧ ಬೆಳೆಯಲಿವೆ ಎಂದರು. ಕ್ರೀಡೆಯ ಜತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತುರೂಡಿಸಿಕೊಳ್ಳಬೇಕು. ಯಾವ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳುತ್ತಾನೋ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾನೆ ಎಂದರು.

ಸಮಾರಂಭದಲ್ಲಿ ಬರಡನಪುರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ನಾಗರಾಜು, ವೀರಶೈವ ಮುಖಂಡರಾದ ಹಿನ್ ಕಲ್ ಬಸವರಾಜು, ಮುಖಂಡರುಗಳಾದ ಎಂ.ಕುಮಾರ್, ನಂದೀಶ್ ಚಾಮುಂಡಯ್ಯ, ಲಾಯರ್ ಮಹೇಶ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page