ಮೈಸೂರಿನ ಅಶೋಕ ರಸ್ತೆಯಲ್ಲಿಂದು ಇಡೀ ಜಗತ್ತಿನ ಮೂಲೆ ಮೂಲೆಗಳಿಗೆ ಹರೇ ಕೃಷ್ಣ ಮಂತ್ರವನ್ನು ಸಾರಿದಂತಹ ಏಕೈಕ ಇಸ್ಕಾನಿನ ಸಂಸ್ಥಾಪಕ ಆಚರ್ಯರಾದ “ಶ್ರೀಲ A.C.ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ರವರ 125ನೇ ಆವಿರ್ಭವ ಜನ್ಮ ದಿನಾಚರಣೆ ಯನ್ನು ಬನ್ನೂರಿನ ಸಮಾಜ ಸೇವಕರು ಮತ್ತು ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ರವರ ನೇತೃತ್ವದಲ್ಲಿ ನಡೆಸಲಾಯಿತ್ತು.
ಜನ್ಮ ದಿನಾಚರಣೆ ಅಂಗವಾಗಿ ಹರಿನಾಮ ಸಂಕೀರ್ತನೆ ಹಾಗೂ ಪ್ರಸಾದ ವಿತರಣೆಯನ್ನು ಮಾಡಲಾಯಿತ್ತು.
ಇನ್ನು ಇದೆ ಸಂದರ್ಭದಲ್ಲಿ
ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತ್ತು.
ಇನ್ನೂ ಈ ಕಾರ್ಯಕ್ರಮದಲ್ಲಿ ರಾಜ್ ಕುಮಾರ್ ಸೋನಿ,ಜಯರಾಮ್ ಸಿರಾವಿ,H.ರತನ್ ಚಂದ್ ಪುರೋಹಿತ್,ಪ್ರಕಾಶ್ ದಕ್, ರಿತೇಶ್ ಸೇನಾನಿ,ಮದನ್ ಲಾಲ್ ರಾಜ್ ಪುರೋಹಿತ್ ರವರು ಸೇರಿದಂತೆ ಹಲವಾರು ಭಾಗಿಯಾಗಿದ್ದರು.