ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ತಂದು ಕೊಟ್ಟ ನೀರಜ್ ಚೋಪ್ರಾ.
ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಬರೋಬ್ಬರಿ 87.86 ಮೀ ದೂರ ಎಸೆಯುವ ಮೂಲಕ ಚೋಪ್ರಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಅರ್ಹತಾ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ 86.65 ಮೀಟರ್ ದೂರ ಎಸೆಯುವ ಮೂಲಕ ಮೊದಲಿಗರಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದರು. ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲಿಯೇ 87.03 ಮೀಟರ್ ಎಸೆದಿದ್ದರು. ಎರಡನೇ ಪ್ರಯತ್ನದಲ್ಲಿ 87.86 ಮೀ ದೂರ ಎಸೆದು ದಾಖಲೆ ನಿರ್ಮಿಸಿದರು.
ಅಂತಿಮ ಪ್ರಯತ್ನದಲ್ಲಿ 75 ಮೀಟರ್ ಮಾತ್ರ ಎಸೆದರು.
ಆ ಮೂಲಕ ಅತಿ ದೂರ ಎಸೆದು ಮೊದಲಿಗರಾಗಿದ್ದಾರೆ.
ಚೆಕ್ ರಿಪಬ್ಲಿಕ್‌ನ ವಿ.ವೆಸ್ಲಿ 86.67 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದರೆ, ಜರ್ಮನಿಯ ಜೆ.ವೆಬರ್ 85.30 ಎಸೆದು ಕಂಚು ತನ್ನದಾಗಿಸಿಕೊಂಡರು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10ಮೀ ಏರ್ ರೈಫಲ್ ವಿಭಾಗದಲ್ಲಿ ಭಾರತದ ಅಭಿನವ್ ಬಿಂದ್ರಾ ಚಿನ್ನ ಗೆದ್ದದ್ದೆ ಭಾರತಕ್ಕೆ ಕಡೆಯ ಚಿನ್ನವಾಗಿತ್ತು.
ಭಾರತ ಇದುವರೆಗೂ ಒಲಿಂಪಿಕ್ಸ್‌ನಲ್ಲಿ 9 ಚಿನ್ನ, 9ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಗೆದ್ದಿದೆ.
ಭಾರತೀಯ ಸೇನೆಯ ನಿಯೋಜಿತ ಅಧಿಕಾರಿ
ನೀರಜ್ ಚೋಪ್ರಾ ಭಾರತೀಯ ಸೇನೆಗೆ ಸೇರಿದ್ದಾರೆ, ರೈತನಾಗಿರುವ ತಂದೆಗೆ ಆರ್ಥಿಕ ಸಹಾಯ ಮಾಡಿದ ತೃಪ್ತಿ ಅವರಿಗಿದೆ , ಅವರನ್ನು ಭಾರತೀಯ ಸೇನೆಯು ಕಿರಿಯ ನಿಯೋಜಿತ ಅಧಿಕಾರಿಯಾಗಿ ನೇಮಿಸಿರುವುದು ಒಂದು ವಿಶೇಷ..