ವಿಜಯದಶಮಿಯು ಅಧರ್ಮದ ವಿರುದ್ಧ ವಿಜಯ ಸಾಧಿಸಿ ನಾಡಿನಲ್ಲಿ ಧರ್ಮ ಸ್ಥಾಪಿಸಿದ ಆಚರಣೆ ಅದರೆ ಇಂದಿನ ಕಾಲದಲ್ಲಿ ವಿಜಯ ಎಂದರೆ ಅದು ನಾದಿನ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಆಗಿದೆ ಈ ಹಿನ್ನೆಲೆಯೊಂದಿಗೆ ಮೈಸೂರಿನ ಎಡಿನ್ ಬ್ರಿಡ್ಜ್ ಫೌಂಡೇಶನ್ ಹಾಗೂ ಎಸ್ ಡಿ ಎಂ ಐ ಎಂ ಡಿ ಸಂಸ್ಥೆಯು ಎಕ್ಸಲ್ ಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಸಹ ಭಾಗಿತ್ವದೊಂದಿಗೆ ಒಂದು ದಿನದ ಕೈಗಾರಿಕಾ ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ ಆರ್ ದಸರಾ ಮೈಸೂರಿನ ಕೈಗಾರಿಕಾ ಸಮೃದ್ಧಿಯ ಒಳನೋಟ ಕಾರ್ಯಕ್ರಮವನ್ನು ನವೆಂಬರ್ 26 ರಂದು ಎಸ್ ಡಿ ಎಂ ಸಂಸ್ಥೆಯಲ್ಲಿ, ಆಯೋಜಿಸಿದೆ ಎಂದು ಎಡಿನ್ ಸಿನರ್ಜಿ ಸಿ ಎಸ್ ಆರ್ ಮುಖ್ಯಸ್ಥರಾದ ಹೇಮಲತಾ ಮತ್ತು ಹ್ಯಾರಿಸ್ ಅವರು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ಈ ಕಾರ್ಯಕ್ರಮವು ಮುಖ್ಯವಾಗಿ ಮೈಸೂರಿನ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿದೆ . ಮುಂಬರುವ ಕೈಗಾರಿಕಾ ಯೋಜನೆಗಳು ಹಾಗೂ ಮೈಸೂರಿನ ಕೈಗಾರಿಕಾ ಬೆಳವಣಿಗೆಯ ಸಾಮರ್ಥ್ಯ, ಮೈಸೂರಿನ ಹೊಸ ಉದ್ಯೋಗಾವಕಾಶಗಳು , ಮೈಸೂರಿನ ಜೆ ಡಿ ಪಿ ಬೆಳವಣಿಗೆಯ ಕುರಿತು ಚರ್ಚೆ , ಮೈಸೂರಿನ ಯಶಸ್ವೀ ಸ್ಟಾರ್ಟ್ ಅಪ್ ಗಳು ಈ ಕಾರ್ಯಕ್ರಮಕ್ಕೆ ಹೆಸರಾಂತ ಕೈಗಾರಿಕೆಗಳ ಪ್ರಮುಖರು ಬ್ಯುಸಿನೆಸ್ ಲೀಡರ್ಸ್ ಕಂಪನಿಗಳ ಮುಖ್ಯಸ್ಥರು ಸಿ ಇ ಓ ಗಳು ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ ಸುಮಾರು 300 ರಕ್ಕು ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ..
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಪ್ರತಾಪ್ ಸಿಂಹ ಲೋಕಸಭಾ ಸದಸ್ಯರು ಭಾಗವಹಿಲಿದ್ದಾರೆ . ಮತ್ತು ಲಿಂಗರಾಜು ಜಂಟಿ ನಿರ್ದೇಶಕರು ಡಿ.ಐ.ಸಿ ಮೈಸೂರು , ಆರ್ ಕೆ ಪಾರ್ಥಸಾರದಿ ಮೈಸೂರು ಕಾರ್ಖಾನೆಗಳ ಜಂಟಿ ನಿರ್ದೇಶಕರು ಸೇರಿದಂತೆ ಹಲವಾರು ಕೈಗಾರಿಕೋದ್ಯಮಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು,
ಸುದ್ದಿಗೋಷ್ಟಿಯಲ್ಲಿ ಎಡಿನ್ ಸಿನರ್ಜಿ ಮ್ಯಾನೇಜಿಂಗ್ ಡೈರೆಕ್ಟರ್ ಪ್ರತಾಪ್ , ಡಾ. ಸುನೀಲ್ , ಫಣೀಶ್ ಉಪಸ್ಥಿತರಿದ್ದರು ..
ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಸಂಪರ್ಕಿಸ ಬಹುದು,
ಫಣೀಶ್ : 7022036998
ಪ್ರತಾಪ್ ಹಾಸನ್ : 9964005854
e-mail:- hr@edinsynergy.com