Lohith hanumanthappa.
ಸಾಂಸ್ಕೃತಿಕ ನಗರಿ ಮೈಸೂರಿಗೆ ಹೆಮ್ಮೆಯ ಪ್ರತೀಕ , ಮೈಸೂರಿಗೆ ಹೆಮ್ಮೆಯಗರಿ ಎಂದರೆ ಅದು ಮೈಸೂರಿನ ಅರಮನೆ , ಈ ಅರಮನೆ ಆವರಣದಲ್ಲಿ ಅನೇಕ ದೇವಸ್ಥಾನಗಳಿವೆ ಅದರಲ್ಲಿ ಕನ್ನಡಾಂಭೆ ಭುವನೇಶ್ವರಿ ತಾಯಿಯ ದೇವಸ್ಥಾನವಿರುವುದು ಮೈಸೂರಿಗರ ಅದೃಷ್ಟ, ..
ಇದೆ ರೀತಿ ಸ್ವತಂತ್ರವಾಗಿ ನೂರಾರು ವರ್ಷಗಳ ಹಿಂದೆಯೇ ತಾಯಿ ಭುವನೇಶ್ವರಿ ತಾಯಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ..
ಅದು ಎಲ್ಲಿ ಅಂತಿರಾ ಈ ಸ್ಟೋರಿ ನೋಡಿ.
ಹೌದು ಕ್ರಿ.ಶ 1692ರಲ್ಲಿಯೇ ಭುವನೇಶ್ವರಿ ತಾಯಿ ದೇವಸ್ಥಾನ ನಿರ್ಮಾಣ ವಾಗಿದೆ..
ಬಿಳಗಿ ಸಾಮ್ರಾಜ್ಯವೂ ಗಂಗಾವಳಿ ತೀರದಿಂದ ಉಡುಪಿಯ ಗಂಗೊಳ್ಳಿ ತೀರದ ವರೆಗೆ ಹಬ್ಬಿತ್ತು.
ಬಿಳಗಿಯ ಅರಸರು ಕನ್ನಡದ ಆರಾಧಕರು ಮತ್ತು ಕನ್ನಡವನ್ನು ಪ್ರೀತಿಸುವವರು ಆಗಿದ್ದರಿಂದ ಕನ್ನಡ ತಾಯಿಗಾಗಿ ಒಂದು ಆಲಯವನ್ನು ನಿರ್ಮಿಸಬೇಕೆಂಬ ಸಂಕಲ್ಪದಿಂದ ಭುವನಗಿಯಲ್ಲಿ ಕದಂಬರ ಕಾಲದ ಭುವನೇಶ್ವರಿ ದೇಗುಲವನ್ನು ಪುನರ್ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ..
*ಕದಂಬರ ಕಾಲದ ಭುವನೇಶ್ವರಿ ದೇವಾಲಯಕ್ಕಿದೆ ನೂರಾರು ವರ್ಷಗಳ ಇತಿಹಾಸ*
ತಾಯಿ ಕನ್ನಡಾಂಬೆಯ ಈ ದೇವಾಲಯ ಇರುವುದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಶಿಖರದಲ್ಲಿ .
ಇದು ಇವತ್ತು ನಿನ್ನೆಯ ದೇವಾಲಯ ಅಲ್ಲ.
ಕದಂಬರ ಕಾಲದ ಕನ್ನಡ ದೇವಾಲಯ.
ಹಚ್ಚಹಸುರಿನ ಮಲೆನಾಡಿನ ತಪ್ಪಲಿನ ಭುವನ ಗಿರಿ ಶಿಖರದಲ್ಲಿ ನಾಡಿನ ಆದಿ ದೇವತೆ ಭುವನೇಶ್ವರಿ ದೇವಿ ನೆಲೆಸಿದ್ದಾಳೆ.
ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಕದಂಬರು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಿದ್ದಾಪುರ ಆಳುವ ಸಂದರ್ಭದ ಕಾಲದಲ್ಲಿ ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ತಮ್ಮ ಕುಲದೇವಿಯನ್ನಾಗಿ ಆರಾಧಿಸುತ್ತಿದ್ದರು.
ನಂತರದ ದಿನಗಳಲ್ಲಿ ದೇವಾಲಯ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಆಗದ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ದೇವಾಲಯ ನಿರ್ಮಾಣ ಮಾಡಲು ಮನಸ್ಸು ಮಾಡಿದರಾದರೂ.
ಈ ಕಾಲದಲ್ಲೂ ಪೂರ್ಣ ಪ್ರಮಾಣದಲ್ಲಿ ದೇವಾಲಯ ನಿರ್ಮಾಣದ ಭಾಗ್ಯ ಕೈಗೂಡಲಿಲ್ಲ.
ಬಳಿಕ ಬಿಳಗಿ ಅರಸರು ದೇವಾಲಯವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿದರು ಎನ್ನುವ ಬಗ್ಗೆ ಇತಿಹಾಸ ಇದೆ. ಕ್ರಿ.ಶ 1692ರಲ್ಲಿ ಬಿಳಗಿ ಅರಸರು ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು ಎಂಬ ಉಲ್ಲೇಖವಿದೆ.
*ದೇವಿ ಭುವನೇಶ್ವರಿ ನಾಡಿನ ಆದಿ ದೇವತೆಯಾಗಿದ್ದು ಹೇಗೆ?*
ಬಿಳಗಿ ಸಾಮ್ರಾಜ್ಯವೂ ಗಂಗಾವಳಿ ತೀರದಿಂದ ಉಡುಪಿಯ ಗಂಗೊಳ್ಳಿ ತೀರದ ವರೆಗೆ ಹಬ್ಬಿತ್ತು.
ಬಿಳಗಿಯ ಅರಸರು ಕನ್ನಡದ ಆರಾಧಕರು ಮತ್ತು ಕನ್ನಡವನ್ನು ಪ್ರೀತಿಸುವವರು ಆಗಿದ್ದರಿಂದ ಕನ್ನಡ ತಾಯಿಗಾಗಿ ಒಂದು ಆಲಯವನ್ನು ನಿರ್ಮಿಸಬೇಕೆಂಬ ಸಂಕಲ್ಪದಿಂದ ಭುವನಗಿಯಲ್ಲಿ ಕದಂಬರ ಕಾಲದ ಭುವನೇಶ್ವರಿ ದೇಗುಲವನ್ನು ಪುನರ್ ನಿರ್ಮಾಣ ಮಾಡಿದರು.
ಅಂದಿನಿಂದ ಇಂದಿನವರೆಗೂ ಕೂಡಾ ತಾಯಿ ಭುವನೇಶ್ವರಿ ದೇವಿ ಕನ್ನಡದ ದೇವಿಯಾಗಿ ನೆಲೆನಿಂತಿದ್ದು, ಈಗ ತ್ರೀಕಾಲ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಇನ್ನು ದೇವಾಲಯದ ಗರ್ಭಗುಡಿಯಲ್ಲಿ ಕದಂಬರ ಕಾಲದ ಕಲೆಯನ್ನು ಪರಿಚಯಿಸುವ ಅನೇಕ ಕೆತ್ತನೆಗಳು ಇಂದಿಗೂ ರಾರಾಜಿಸುತ್ತಿವೆ.
ಜತೆಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿವೆ.
ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ ನೆಲೆನಿಂತ ಕನ್ನಡದ ಆದಿ ದೇವತೆಗೆ ಇಂದಿಗೂ ತ್ರಿಕಾಲ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಆದರೆ ಎಷ್ಟೋ ಜನರಿಗೆ ಈ ದೇವಸ್ಥಾನದ ಬಗ್ಗೆ ಪರಿಚಯವೇ ಇಲ್ಲ..
ಈ ಐತಿಹಾಸಿಕ ಕನ್ನಡ ದೇವಾಲಯ ಅಭಿವೃದ್ದಿಯ ದೃಷ್ಟಿಯಿಂದ ಇಂದಿಗೂ ಸರಕಾರದ ಕಣ್ಣಿಗೆ ಬಿದ್ದಿಲ್ಲದಿರುವುದು ನೋವಿನ ವಿಚಾರ..
ಲೋಹಿತ್ ಹನುಮಂತಪ್ಪ ಮೈಸೂರು