ಚೆನ್ನೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಐಪಿಎಲ್ 14ರ ಉದ್ಘಾಟನಾ ಪಂದ್ಯ(ಏಪ್ರಿಲ್ 9ರಂದು)ವು ಭರ್ಜರಿ ವೀಕ್ಷಣೆ ಪಡೆದುಕೊಂಡು ದಾಖಲೆ ಬರೆದಿದೆ.
ಐಪಿಎಲ್ 2020 ಹೊರತುಪಡಿಸಿದರೆ ಮಿಕ್ಕೆಲ್ಲ ಆವೃತ್ತಿ ಐಪಿಎಲ್ ಆರಂಭಿಕ ಪಂದ್ಯಗಳಿಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಎಂದು ಅಂಕಿ ಅಂಶ ಹೊರ ಬಂದಿದೆ.
ದೇಶದ ಅತಿದೊಡ್ಡ ಕ್ರಿಕೆಟ್ ಲೀಗ್ ಮೇಲೆ ಪ್ರಸಾರದ ಹಕ್ಕು ಪಡೆದುಕೊಂಡಿರುವ ಸ್ಟಾರ್ ಹಾಗೂ ಡಿಸ್ನಿ ಇಂಡಿಯಾ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ. ಸರಿ ಸುಮಾರು 10 ಬಿಲಿಯನ್ ನಿಮಿಷ (9.7 ಬಿಲಿಯನ್) ಗಳ ಕಾಲ ಮೊದಲ ಪಂದ್ಯದ ವೀಕ್ಷಣೆ ದಾಖಲಾಗಿದೆ. ಜೊತೆಗೆ 323 ಮಿಲಿಯನ್ ಇಂಪ್ರೆಷನ್ ದಾಖಲಿಸಿದೆ ಎಂದು BARC ಅಂಕಿ ಅಂಶ ತಿಳಿಸಿದೆ. ಐದಾರು ತಿಂಗಳಲ್ಲೇ ಮತ್ತೊಂದು ಸೀಸನ್ ಆರಂಭವಾದರು ವೀಕ್ಷಕರ ಸಂಖ್ಯೆ, ಕ್ರಿಕೆಟ್ ಆಸಕ್ತರು ಕಡಿಮೆಯಾಗಿಲ್ಲ.