ಜಾನ್ವಿ ಕಪೂರ್ ಶ್ರೀದೇವಿಯ ಕೈಬರಹದ ಟಿಪ್ಪಣಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಆ ಫೋಟೋಗಳು ಈಗ ವೈರಲ್ ಆಗಿದೆ,
ಬಾಲಿವುಡ್ ನಲ್ಲಿ ನಿಧಾನವಾಗಿ ಮಿಂಚುತ್ತಿರುವ ನಟಿ ಶ್ರೀದೇವಿ ಪುತ್ರಿ
ಜಾನ್ವಿ ಕಪೂರ್ ತನ್ನ ತಾಯಿಯ ನೆನಪಿಗೆ ಹೊಸದೊಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ..
ತನ್ನ ದಿವಂಗತ ತಾಯಿ ಶ್ರೀದೇವಿಯನ್ನು ನೆನಪಿಸಿಕೊಂಡು ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ..
ಜಾನ್ಹವಿ ಇತ್ತೀಚಿನ ರಜೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರವಾಸದ ಸಮಯದಲ್ಲಿ, ಜಾನ್ವಿ ತನ್ನ ಮಣಿಕಟ್ಟಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ
ಅ ಹೊಸ ಟ್ಯಾಟೂ, ‘ಐ ಲವ್ ಯೂ ಮೈ ಲಬ್ಬು’ ಎಂದು..
ಆಕೆಯ ತಾಯಿ ಶ್ರೀದೇವಿಯ ಕೈಬರಹದ ಟ್ಯಾಟೂ ಅದಾಗಿದೆ..
ಜಾನ್ವಿಯನ್ನು ಆಕೆಯ ತಾಯಿ ಪ್ರೀತಿಯಿಂದ ‘ಲಬ್ಬು’ ಎಂದು ಕರೆಯುತ್ತಿದ್ದರು.
ಶ್ರೀದೇವಿ ತನ್ನ ಮಗಳಿಗೆ “ಐ ಲವ್ ಯೂ ಮೈ ಲಬ್ಬು. ನೀನು ವಿಶ್ವದ ಅತ್ಯುತ್ತಮ ಮಗು. ” ಎಂದು ಬರೆದ್ದರು ಇವಾಗ ಮಗಳು ಅದನ್ನೆ ಟ್ಯಾಟೋ ಹಾಕಿಸಿಕೊಂಡು ತಾಯಿಯನ್ನು ನೆನೆದಿದ್ದಾರೆ…