ಮೈಸೂರಿನ ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದ ಕನ್ನಡ ವಿಕಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿಂದು “ವಿಸ್ಮಯ ಬುಕ್ ಹೌಸ್ ಮತ್ತು ಸಾಹಿತ್ಯ ಲೋಕ ಮೈಸೂರು” ಇವರ ಸಮರ್ಪಣೆ ಯೊಂದಿಗೆ “ಹೆಸರಾಂತ ಅಂಕಣಕಾರರದ ಡಾ.ಗುಬ್ಬಿಗೂಡು ರಮೇಶ್ ರವರ “ದಡ ಸೇರದ ಧಾವಂತಗಳು”ಅಂಕಣಗಳ ಸಂಕಲನ ಎಂಬ ಕೃತಿಯ ಲೋಕಾರ್ಪಣ ಸಮಾರಂಭವನ್ನು ಆಯೋಜಿಸಲಾಗಿತ್ತು.
ಇನ್ನು ಈ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಸುತ್ತೂರಿನ ಜಗದ್ಗುರು ವೀರಸಿಂಹಸನ ಮಹಾ ಸಂಸ್ಥಾನ ಮಠದ ಶ್ರೀಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು,ಹೆಸರಾಂತ ಸಾಹಿತಿಗಳು,ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್,ಬನ್ನೂರಿನ ಸಮಾಜ
ಸೇವಕರು,ಬನ್ನೂರು ಪರಿಸರ ಜಾಗೃತಿ ವೇದಿಕೆಯ
ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ,ಮೈಸೂರು ವಿವಿ ಯ ಕುಲಪತಿಗಳಾದ ಪ್ರೊ.ಜಿ.ಹೇಮಂತ್ ಕುಮಾರ್, ಮಾಜಿ ಶಾಸಕರಾದ ವಾಸು,ಸಾಹಿತ್ಯ ಲೋಕದ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ,ಕೃತಿಕಾರರಾದ ಡಾ.ಗುಬ್ಬಿಗೂಡು ರಮೇಶ್,ಪ್ರಕಾಶಕರಾದ ಪ್ರಕಾಶ್ ಚಿಕ್ಕಪಾಳ್ಯ,ಸಾಹಿತ್ಯ ಲೋಕದ ಕಾರ್ಯದರ್ಶಿಗಳಾದ ಎ.ಜಿ.ದೇವರಾಜು,ಕೋಶಾಧ್ಯಕ್ಷರಾದ ಎಲ್ಐಸಿ ಶೇಖರ್ ರವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಬನ್ನೂರಿನ ಸಮಾಜ ಸೇವಕರು,ಬನ್ನೂರು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರು ಮತ್ತು ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯದ ಕಲಾ ಆಸಕ್ತರು ಆದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಸಾಹಿತ್ಯ ಲೋಕದ ಅಭಿವೃದ್ಧಿಗೆ 25 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು.
ಈ ವೇಳೆ ಕಾಳಪ್ಪ ನವರು ಹೆಸರಾಂತ ಅಂಕಣಕಾರರಾದ ಡಾ.ಗುಬ್ಬಿಗೂಡು ರಮೇಶ್ ರವರನ್ನು ಮತ್ತು ಸಾಹಿತ್ಯ ಲೋಕದ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ ರವರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುತ್ತೂರಿನ ಜಗದ್ಗುರು ವೀರಸಿಂಹಸನ ಮಹಾ ಸಂಸ್ಥಾನ ಮಠದ ಶ್ರೀಶ್ರೀ ಶಿವರಾತ್ರಿದೇಶಿಕೇಂದ್ರ
ಮಹಾಸ್ವಾಮಿಗಳು ಆಶೀರ್ವಚನ ನೀಡಿ ಬನ್ನೂರಿನ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ರವರನ್ನು ಗೌರವಿಸಿ ಸನ್ಮಾನಿಸಿದರು.