ಮೈಸೂರಿನಲ್ಲಿ ಹಲವೆಡೆ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆದವು, ಅದರಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿದ್ದು ಜೆಪಿ ನಗರದ ಯುವಕರ ಪಡೆ
ಯುವ ಉದ್ಯಮಿ , ಸಮಾಜಸೇವಕ ಚೆಲುವರಾಜ್ ನೇತೃತ್ವದಲ್ಲಿ ಇದೆ ಪ್ರಥಮ ಬಾರಿಗೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,
ಕಾರ್ಯಕ್ರಮಕ್ಕೆ ಮೆರಗು ನೀಡಲು ಗಿಚ್ಚಿ ಗಿಲಿ ಗಿಲಿ ತಂಡವು ಸಾಕಷ್ಟು ಸಮಯ ಜೆಪಿ ನಗರದ ನಿವಾಸಿಗಳನ್ನು ರಂಜಿಸಿದರು, ಜೊತೆಗೆ ಸಂಗೀತ ರಸ ಸಂಜೆಯೂ ನಡೆಯಿತು,
ಈ ಅದ್ದೂರಿ ಕಾರ್ಯಕ್ರಮಕ್ಕೆ ಮೈಸೂರು ಯದುವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಮಾಜಿ ಸಂಸದ ಪ್ರತಾಪ್ ಸಿಂಹ, ಡಾ. ಶುಶ್ರೂತ್ ಗೌಡ , ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಇನ್ನಷ್ಟು ಘನತೆಯನ್ನು ಹೆಚ್ಚಿಸಿದರು,
ಇದೆ ಸಂಧರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕ, ಯುವ ಉದ್ಯಮಿ ಸಮಾಜ ಸೇವಕ ಚೆಲುವರಾಜ್ ಕನ್ನಡ ರಾಜ್ಯೋತ್ಸವ ಪ್ರತಿ ಕನ್ನಡಿಗನ ಹೆಮ್ಮೆಯ ಹಬ್ಬ , ಇದನ್ನು ಪ್ರತಿಯೊಬ್ಬರೂ ಆಚರಿಸಬೇಕು, ಜೆಪಿ ನಗರದ ಜನತೆಗಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ , ಜೊತೆಗೆ ಯುವಕರು ಕನ್ನಡಪರ ಕೆಲಸಗಳನ್ನು ಮಾಡಬೇಕು , ಕೆಟ್ಟ ಚಟಗಳಿಗೆ ದಾಸರಾಗದೆ , ದೇಹವನ್ನು ದಂಡಿಸಿ, ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು , ಜೊತೆಗೆ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಜೆಪಿ ನಗರದ ಸ್ನೇಹಿತರು, ನಿವಾಸಿಗಳು, ಆಟೋ ಚಾಲಕರುಗಳಿಗೆ ಧನ್ಯವಾದ ತಿಳಿಸಿದರು,
ಇನ್ನೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರುಗಳನ್ನು ಮತ್ತು ಕಲಾವಿದರುಗಳನ್ನು ಆದರದಿಂದ ಗೌರವಿಸಲಾಯಿತು,