ಬೆಂಗಳೂರು: ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಾಳೆ ನಡೆಯಲಿದ್ದು, ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ಗೆ ಈ ಚುನಾವಣೆ ಭಾರಿ ಪ್ರತಿಷ್ಠೆಯದಾಗಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರ ತೆರವಾದದ್ದರಿಂದ ಉಪ ಚುನಾವಣೆ ನಡೆಸಲಾಗುತ್ತಿದೆ. ಬಸವಕಲ್ಯಾಣದ ಶಾಸಕರಾಗಿದ್ದ ಬಿ.ನಾರಾಯಣ ರಾವ್ ನಿಧನದ ಕಾರಣದಿಂದ ಉಪ ಚುನಾವಣೆ ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಸ್ಕಿಯಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪ ಗೌಡ ಪಾಟೀಲ್ ನಂತರ ಮಿತ್ರಮಂಡಳಿ ಕೋಟಾದಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗಾಗಿ ಮಸ್ಕಿಯಲ್ಲಿಉಪ ಚುನಾವಣೆ ನಡೆಸಲಾಗುತ್ತಿದೆ.
ಕಣದಲ್ಲಿರುವ ಪ್ರಮುಖರು
ಬೆಳಗಾವಿ ಕ್ಷೇತ್ರ
- ಬಿಜೆಪಿ – ಮಂಗಳಾ ಅಂಗಡಿ
- ಕಾಂಗ್ರೆಸ್ - ಸತೀಶ್ ಜಾರಕಿಹೊಳಿ
ಮಸ್ಕಿ ಕ್ಷೇತ್ರ
- ಬಿಜೆಪಿ – ಪ್ರತಾಪಗೌಡ ಪಾಟೀಲ್
- ಕಾಂಗ್ರೆಸ್ – ಬಸನಗೌಡ ತುರವೀಹಾಳ್
ಬಸವಕಲ್ಯಾಣ ಕ್ಷೇತ್ರ
- ಬಿಜೆಪಿ – ಶರಣು ಸಲಗರ್
- ಕಾಂಗ್ರೆಸ್ – ಮಾಲಾ ನಾರಾಯಣ ರಾವ್
- ಜೆಡಿಎಸ್ - ಸೈಯದ್ ಯಶ್ರಬ್ ಅಲಿ ಖಾದ್ರಿ
- ಪಕ್ಷೇತರ – ಮಲ್ಲಿಕಾರ್ಜುನ ಖೂಬಾ