ಮೈಸೂರಿನ ಮೂಡಾ ಕಚೇರಿಯಲ್ಲಿ ಮನೆ ಕಟ್ಟಿಸಿರುವವರಿಗೆ ಒಸಿ ಹಾಗೂ ಸಿಆರ್ ಕೊಡಲು ಸಾಕಷ್ಟು ತೊಂದರೆಗಳು ಆಗುತ್ತಿದ್ದು ಲಂಚ ಕ್ಕೇಳುತ್ತಿರುವುದರ ಬಗ್ಗೆ ಹಲವಾರು ಅಹವಾಲು ಬಂದ್ದಿದ್ದರ ಕಾರಣ ಸತ್ಯಾಸತ್ಯತೆಗಳನ್ನು ಕಂಡು ಹಿಡಿಯುವುದಕ್ಕಾಗಿ 2 ಮನೆಗಳಿಗೆ ಅಪ್ಲಿಕೇಶನ್ ಕೊಡಲಾಗಿ ಅಧಿಕಾರಿಗಳು ಜನಸಾಮಾನ್ಯರನ್ನು ಅಲೆದಾಡಿಸಿ ತೊಂದರೆ ಕೊಡುತ್ತಿದ್ದಾರೆ ಎಂದು
ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತುರ್ತಾಗಿ ಮೂಡಾ ಕಚೇರಿಯ ಮುಂದೆ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು,
ಇದರ ವಿಚಾರವಾಗಿ ಮೂಡ ಕಮಿಷನರ್ ಅವರು ತಕ್ಷಣ ಕರೆಸಿ ವಿಚಾರವನ್ನು ತಿಳಿದುಕೊಂಡು ಇನ್ನೂ ಎರಡು ದಿನಗಳ ಒಳಗಾಗಿ ಆಗಿರುವ ಸಮಸ್ಯೆಯ ಬಗ್ಗೆ ತುರ್ತು ಕ್ರಮವನ್ನು ತೆಗೆದುಕೊಂಡು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆಶ್ವಾಸನೆ ಕೊಟ್ಟಿರುವುದರಿಂದ ತುರ್ತಾಗಿ ಕೊಟ್ಟ ಹೋರಾಟದ ಕರೆಯನ್ನು ಹಿಂದೆ ಪಡೆದುಕೊಳ್ಳಲಾಗಿದೆ ಎಂದು ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಿದ್ಯಾಸಾಗರ ರಾಮೇಗೌಡ ಮಾಹಿತಿ ನೀಡಿದರು.
ಮೂಡ ಕಚೇರಿಯಿಂದ ಇದೇ ರೀತಿಯ ವರ್ತನೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಂಡು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ
ಇದೆ ಸಂಧರ್ಭದಲ್ಲಿ
ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲನಾ ಸಮಿತಿ ಸದಸ್ಯ ಹಾಗೂ ಜಿಲ್ಲಾಧ್ಯಕ್ಷರು ಮಂಜು ಕಿರಣ್ , ರಘು , ಸತೀಶ್ ರಾವ್ ,ವೆಂಕಟೇಶ್ ಚೆಲುವೇಗೌಡ, ತಾಲೂಕು ಪದಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.