ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ “ನಂದಿನಿ ಬ್ರಾಂಡ್” ಮತ್ತೊಮ್ಮೆ ತಿರುಪತಿ ದೇವಾಲಯದ ಪ್ರಸಾದಕ್ಕೆ ತುಪ್ಪ ಪೂರೈಸುವ ಪುಣ್ಯಕಾರ್ಯಕ್ಕೆ ಅಣಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ತಿರುಪತಿ ತಿರುಮಲ ದೇವಸ್ಥಾನದಿಂದ 350 ಮೆಟ್ರಿಕ್ ಟನ್ ತುಪ್ಪ ಪೂರೈಕೆಯ ಬೇಡಿಕೆಯಿದ್ದು, ಇದರ ಅಂಗವಾಗಿ ಇಂದು ತಿರುಪತಿಯತ್ತ ಹೊರಟ ತುಪ್ಪದ ಟ್ಯಾಂಕರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಸಿರು ನಿಶಾನೆ ತೋರಿದರು.
ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯಕ್ ಮತ್ತು ಕೆಎಂಎಫ್ ಎಂಡಿ ಜಗದೀಶ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.