ಬನ್ನೂರಿನ ಸಮಾಜ ಸೇವಕರಾದ ಮಹೇಂದ್ರ ಸಿಂಗ್ ಕಾಳಪ್ಪನವರು ತಮ್ಮ ಅಜ್ಜಿಯಾದ ಮಥುರಾ ಸಿಂಗ್ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಪಾರಿವಾಳಕ್ಕೆ ಆಹಾರ ಹೊದಗಿಸಿ , ವೃದ್ದಾಶ್ರಾಮದಲ್ಲಿರುವ ವಯೋ ವೃದ್ದರಿಗೆ ಸಿಹಿ ವಿತರಿಸಿ ಆಚರಿಸಿದರು..
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಬೆಳ್ಳಂ ಬೆಳಗ್ಗೆ ಪಾರಿವಾಳಗಳಿಗೆ ಆಹಾರ ಧಾನ್ಯಗಳನ್ನು ಹಾಕಿದರು, ಮತ್ತು ಎನ್ ಆರ್ ಮೊಹಲ್ಲಾ ದಲ್ಲಿರುವ ಆಶ್ರಯ ಚಾರಿಟೇಬಲ್ ಟ್ರಸ್ಟ್ ವೃದ್ದಾಶ್ರಮದಲ್ಲಿರುವ ವಯೋವೃದ್ದರಿಗೆ ಸಿಹಿ ವಿತರಿಸುವ ಮೂಲಕ ತಮ್ಮ ಪ್ರೀತಿಯ ಅಜ್ಜಿಯ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಿದರು..