ಜಾತಿ ಜನಗಣತಿ ಸಮೀಕ್ಷೆಯ ವರದಿಯನ್ನ ಕೂಡಲೇ ಸರ್ಕಾರ ಜಾರಿಮಾಡುವಂತೆ ಒತ್ತಾಯಿಸಿ
ಇದೆ ತಿಂಗಳು ಅಂದರೆ ಅಕ್ಟೋಬರ್ 16 ತಾರೀಖು ಬೆಳಗ್ಗೆ 11 ಗಂಟೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ತಿಳಿಸಿದರು
ಮೈಸೂರಿನ ಸಿದ್ದಾರ್ಥ ಲೇ ಔಟ್ ನಲ್ಲಿರುವ ಕನಕ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯನಂತರ ಮಾತಾಡಿದ ಅವರು ಮೈಸೂರಿನಿಂದ ಸುಮಾರು ಐದು ಸಾವಿರಜನ ತೆರಳಿಲಿದ್ದೇವೆ,
18 ನೇ ತಾರೀಖು ನೆಡೆಯುವ ಕ್ಯಾಬಿನೆಟ್ ಸಭೆಯಲ್ಲಿ
ಜಾತಿ ಜನಗಣತಿ ಸಮೀಕ್ಷೆಯ ವರದಿಯನ್ನ ಜಾರಿ ಮಾಡಬೇಕೆಂದು ಒತ್ತಾಯಿಸಿ,
16 ನೇ ತಾರೀಖು ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಧರಣಿ ಸತ್ಯಗ್ರಹಕ್ಕೆ ಎಲ್ಲರೂ ಪಾಲ್ಗೊಳ್ಳಬೇಕು , ಧ್ವನಿ ಎತ್ತಬೇಕು,
ಈ ಜಾತಿಗಣತಿ ಜಾರಿಮಾಡುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ, ಆದ್ದರಿಂದ ಈ ವಿಚಾರಕ್ಕೆ ಪಕ್ಷತೀತವಾಗಿ ಒಮ್ಮತದಿಂದ 18 ನೇ ತಾರೀಖು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ , ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು ಎಂದು ಮನವಿ ಮಾಡಿದರು
ಸಭೆಯಲ್ಲಿ ರಾಮಚಂದ್ರಪ್ಪ, ಅನಂತನಾಯಕ, ನಾಗರಾಜ್ , ರಾಮಸ್ವಾಮಿ, ರಾಮೇಗೌಡ, ಪುಟ್ಟಸಿದ್ದೆಗೌಡ, ಆನಂದ್, ಶಿವಪ್ಪ ಕೋಟೆ, ಕೆಂಪಣ್ಣ ,ಸೇರಿದಂತೆ ಹಲವರು ಉಪಸ್ಥಿತರಿದ್ದರು.