ಮೈಸೂರಿನ ವಿಜಯನಗರದ ಯೋಗ ನರಸಿಂಹ ದೇಗುಲಕ್ಕೆ ಮೇಘಾಲಯ ರಾಜ್ಯಪಾಲರಾದ ಸಿಹೆಚ್ ವಿಜಯ್ ಶಂಕರ್ ಭೇಟಿ ನೀಡಿದ್ದರು.
ದೇಗುಲಕ್ಕೆ ಆಗಮಿಸಿದ ಮೇಘಾಲಯ ರಾಜ್ಯಪಾಲ ಸಿ.ಹೆಚ್. ವಿಜಯ್ ಶಂಕರ್ ರವರಿಗೆ ದೇಗುಲದ ಟ್ರಸ್ಟ್ ವತಿಯಿಂದ ಶ್ರೀ ಬಾಷ್ಯಂ ಸ್ವಾಮಿಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಲಾಯಿತು ಬಳಿಕ ಯೋಗ ನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದಸರಾ ಪೂಜಾಕೈಂಕರ್ಯದ ಭಾಗವಾದ ಸುದರ್ಶನ ಹೋಮದ ಸಂಕಲ್ಪ ಪೂಜೆಗೆ
ದೇಗುಲದ ಆವರಣದಲ್ಲಿ ಬೃಹತ್ ಅಗರಬತ್ತಿಗೆ ಜ್ಯೋತಿಹೊತ್ತಿಸುವ ಮೂಲಕ
ಗವರ್ನರ್ ಚಾಲನೆ ನೀಡಿದರು
ದಸರಾ ವೇಳೆಯಲ್ಲಿ ನೆಡೆಯುವ ದ್ವಾದಶ ದಿನಗಳ ಈ ಪೂಜಾಕೈಂಕರ್ಯದಲ್ಲಿ ಇದೆ ಶನಿವಾರ ಸುದರ್ಶನ ಹೋಮ ಜರುಗಲಿದ್ದು ವಿಜಯದಶಮಿ ದಿನ ಮಹಾ ಅಭಿಷೇಕ ಪೂಜೆ ನೆಡೆಯಲಿದ್ದು ದೇಗುಲದ ಶುದ್ದಿ ನೆಡೆಸಲಾಗುವುದು ಎಂದು ದೇಗುಲದ ಹಿರಿಯ ಅರ್ಚಕ ಶ್ರೀನಿವಾಸನ್ ರವರು ಮಾಹಿತಿ ನೀಡಿದರು