ಹುಣಸೂರು ಭಾಗದಲ್ಲಿ ಜನ ಸಂಪರ್ಕ ಯಾತ್ರೆ ಕೈಗೊಂಡಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಾಲ್ಲೂಕಿನ ಒಂದನೇ ಪಕ್ಷಿರಾಜಪುರ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ಥರು ತಾವೇ ಸ್ವತಃ ಕೂದಿಲಿನ ಎಣ್ಣೆಯನ್ನು ತಯಾರಿಸಿ ಗ್ರಾಮದಲ್ಲಿ ಉದ್ಯೋಗವನ್ನು ಸೃಷ್ಟಿಸಿ ಸ್ವಾವಲಂಬಿ ಜೀವನ ನಡೆಸುತ್ತಿರುವ ವಿಷಯ ತಿಳಿದು ಗ್ರಾಮಸ್ಥರನ್ನು ಅಭಿನಂದಿಸಿದರು ಮತ್ತು ಕೇಂದ್ರದ ಆಯುಶ್ ಮಂತ್ರಾಲಯದೊಂದಿಗೆ ನೋಂದಣಿ ಮಾಡಿಸಿ ಇದೊಂದು ಮಾದರಿ ಗ್ರಾಮವನ್ನಾಗಿಸಲು ಭರವಸೆ ನೀಡಿದರು.
ಗೌಡನಕಟ್ಟೆ, ಕುರುಬರ ಹೊಸಳ್ಳಿ, ಎರಡನೇ ಪಕ್ಷಿರಾಜಪುರ ಹಾಗು ಮೆಲೂರುಪಾಲ ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿ, ಮುಖ್ಯ ರಸ್ತೆಗಳಿಗೆ ಸಂಪರ್ಕ ಹಾಗು ಡಾಂಬರೀಕರಣ, ಶಾಲಾ ಮಕ್ಕಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆಯ ದುರಸ್ತಿ, ನೂತನ ಸಮುದಾಯ ಭವನ ನಿರ್ಮಾಣ ಮುಖರಸ್ತೆಯ ಡಾಂಬರೀಕರಣ, ಸ್ಮಶಾನ ನಿರ್ಮಾಣ, ಕುಡಿಯುವ ನೀರಿನ ಘಟಕದ ವ್ಯವಸ್ಥೆ, ಹೈ ಮಾಸ್ಕ್ ಬೀದಿ ದೀಪದ ವ್ಯವಸ್ಥೆ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಮನವಿಗಳನ್ನು ಸ್ವೀಕರಿಸಲಾಯಿತು ಹಾಗು ಮುಂದಿನ ದಿನಗಳಲ್ಲಿ ಎಲ್ಲರ ಮನವಿಯನ್ನು ಕಾರ್ಯರೂಪಕ್ಕೆ ತರುವ ಭರವಸೆ ನೀಡಲಾಯಿತು,