ಅಪೋಲೊ ಬಿಜಿಎಸ್ ಆಸ್ಪತ್ರೆ, ಮೈಸೂರು, 100 ಲಿವರ್ ಕಸಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ, ಈ ಪ್ರದೇಶದ ಏಕೈಕ ಬಹು ಅಂಗ ಕಸಿ ಕೇಂದ್ರವಾಗಿದ್ದು, ಇದು ಮೈಸೂರಿನಲ್ಲಿ ಮೊದಲ ಬಾರಿಗೆ 100 ಲಿವರ್ ಕಸಿಯ ಮೈಲಿಗಲ್ಲಾಗಿದೆ.
ಅಪೋಲೊ ಬಿಜಿಎಸ್ ಆಸ್ಪತ್ರೆ, ಮೈಸೂರು, ಈ ಪ್ರದೇಶದಲ್ಲಿ ಅಂಗಿ ಕಸಿಯಲ್ಲಿ ಮುಂಚೂಣಿಯಲ್ಲಿದೆ, ಅಪೋಲೊ ಬಿಜಿಎಸ್ ಆಸ್ಪತ್ರೆ ಮೈಸೂರಿಗೆ 2003ರಲ್ಲಿ ಮೂತ್ರಪಿಂಡ ಕಸಿಗೆ ಪರವಾನಗಿ ದೊರೆತಿದ್ದು 2017ರಲ್ಲಿ ಲಿವರ್ ಕಸಿಗೆ ಪರವಾನಗಿ ಪಡೆದುಕೊಂಡಿತು. 2020ರಲ್ಲಿ ಬಹು ಅಂಗ ಪ್ರತಿಸ್ಥಾಪನೆಗೆ ಪರವಾನಗಿ ಪಡೆಯುವುದರ ಮೂಲಕ ಈ ಪ್ರದೇಶದ ಮೊದಲ ಪರವಾನಗಿ ಪಡೆದ ಅಂಗಿ ಕಸಿ ಕೇಂದ್ರ ಎಂಬ ಮಾನ್ಯತೆಯನ್ನು ಗಳಿಸಿದೆ.
ಈ ಮೈಲುಗಲ್ಲಿಗೆ ಮತ್ತು ಯಶಸ್ವಿ ಶಸ್ತ್ರ ಚಿಕಿತ್ಸೆಗಳಿಗೆ ಅಪೋಲೊ ಆಸ್ಪತ್ರೆಯ ತಜ್ಞ ಶಸ್ತ್ರಚಿಕಿತ್ಸಕರು, ಕಸಿ ತಜ್ಞರು, ಅರಿವಳಿಕೆ ತಜ್ಞರು, ತೀವ್ರ ಚಿಕಿತ್ಸಾ ತಜ್ಞರು ಮತ್ತು ವೈದ್ಯರನ್ನು ಒಳಗೊಂಡಿರುವ ಪ್ರಖ್ಯಾತ ಶಸ್ತ್ರಚಿಕಿತ್ಸಕರ ಗುಂಪು ಕಾರಣವಾಗಿರುತ್ತಾರೆ, ಅಪೋಲೊ ಬಿಜಿಎಸ್ ಆಸ್ಪತ್ರೆಯು ಅತ್ಯಾಧುನಿಕ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ಶಸ್ತ್ರಚಿಕಿತ್ಸಾಲಯವನ್ನು ಹೊಂದಿದೆ, ಆಸ್ಪತ್ರೆಯು ಕಸಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಮೀಸಲಾದ ಐಸಿಯುಗಳನ್ನು ಒಳಗೊಂಡಿದೆ.
ಸುಧಾರಿತ ಪ್ರಯೋಗಾಲಯಗಳಿಂದ ಸಮಗ್ರ ಪರೀಕ್ಷೆಗಳನ್ನು ಮತ್ತು ತನಿಖೆಗಳನ್ನು ಮಾಡಲಾಗುತ್ತದೆ, ಅತ್ಯಾಧುನಿಕ ವಿಕಿರಣದ ಶಾಸ್ತ್ರದ ಸೌಲಭ್ಯವು ನಿಖರವಾದ ರೋಗನಿರ್ಣಯ ಮತ್ತು ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ.
ಈ ಎಲ್ಲ ಸೌಲಭ್ಯಗಳು ಸೇರಿ, ಅಪೋಲೊ ಬಿಜಿಎಸ್ ಆಸ್ಪತ್ರೆಯು ಅಂಗ ಕಸಿಯಲ್ಲಿ ಮುಂಚೂಣಿಯ ಆಯ್ಕೆ ಎಂದು ಪರಿಗಣಿಸಲಾಗಿದೆ.
ಎನ್. ಜಿ. ಭರತೀಶ ರೆಡ್ಡಿ ಡಾ. ರಾಜ್ ಕುಮಾರ್ ಪಿ. ವಧ್ವಾ ಡಾ. ಜಯಂತ್ ರೆಡ್ಡಿ ಡಾ. ಸಂಜಯ್ ಗೋವಿಲ್ ಡಾ. ಸಂದೀಪ್ ಸತ್ಸಂಗಿ, ಡಾ. ಆಥಿರಾ ರವೀಂದ್ರನಾಥ್ ಡಾ. ಸಾಗರ್ ನಾರಾಯಣ್ , ಇವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪರಿಣಿತಿಯನ್ನು ಮತ್ತು ನೂರು ಲಿವರ್ ಕಳಿಸಿ ಪೂರ್ಣಗೊಳಿಸುವ ಅಪೋಲೊ ಬಿಜಿಎಸ್ ಆಸ್ಪತ್ರೆಯ ಅದ್ಭುತ ಸಾಧನೆಯನ್ನು ಉಲ್ಲೇಖಿಸಿದರು.
ಈ ಸಾಧನೆಯು ಅಪೋಲೊ ಆಸ್ಪತ್ರೆಯ ಸಮರ್ಪಿತ ತಂಡದ ಪರಿಣಿತಿಗೆ ಸಾಕ್ಷಿಯಾಗಿದೆ ನುರಿತ ಕಸಿ ಶಸ್ತ್ರಚಿಕಿತ್ಸಕರು, ಗ್ಯಾಸೋಎಂಟರ್ಲಾಜಿಸ್ಟ್, ಹೆಪಟಾಲಜಿಸ್ಟ್, ಅರಿವಳಿಕೆ ತಜ್ಞರು ಮತ್ತು ಸಹಾಯಕ ಸಿಬ್ಬಂದಿಗಳ ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ನೀಡಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. 100 ಲಿವರ್ ‘ಕಸಿ ಪೂರ್ಣಗೊಳಿಸುವ ಮೂಲಕ, ಅಪೋಲೊ ಬಿಜಿಎಸ್ ಆಸ್ಪತ್ರೆ ಮೈಸೂರು ಆಧುನಿಕ ವೈದ್ಯಕೀಯ ಸೇವೆಯಲ್ಲಿ ತನ್ನ ಪ್ರಮುಖ ಸ್ಥಾನವನ್ನು ಸ್ಪಷ್ಟಪಡಿಸಿಕೊಂಡಿದೆ.