ಮೈಸೂರು ಕಾಂಗ್ರೆಸ್ ಪ್ರಚಾರ ಸಮಿತಿ ಮತ್ತು ಜನನಿ ಸೇವಾ ಟ್ರಸ್ಟ್ ವತಿಯಿಂದ ಅನಾಥರು, ನಿರ್ಗತಿಕರು, ಅಂಗವಿಕಲರಿಗೆ ಅಗತ್ಯವಸ್ತುಗಳನ್ನು ವಿತರಣೆ.

ಎಂ ಕೆ ಅಶೋಕ್ ಅವರ ನೇತೃತ್ವದಲ್ಲಿ ವಿಜಯನಗರದಲ್ಲಿರುವ  *ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರೀ ಸೇವಾ ನಿಕೇತನ*  ಅನಾಥರು, ನಿರ್ಗತಿಕರು, ಅಂಗವಿಕಲರಿಗೆ
ಮಾಸ್ಕ್, ಮೊಟ್ಟೆ, ಬಾಳೆಹಣ್ಣು, ಬಿಸ್ಕೆಟ್ ಹಾಗೂ ಅಗತ್ಯವಸ್ತುಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಡಾ. ಎಂ.ಕೆ. ಅಶೋಕ್. ಮಾತನಾಡಿ ಲಾಕ್ಡೌನ್ ನಿಂದ ಇಲ್ಲಿಯವರೆಗೆ ಕರೋನಾ ಸೋಂಕಿತರಿಗೆ ಉಚಿತವಾಗಿ ಅಂಬುಲೆನ್ಸ್ ನಲ್ಲಿ ಅವರ ಮನೆಯಿಂದ ಅವರು ಹೇಳಿದ್ದ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವುದು ಮತ್ತು  ಅಗತ್ಯ ಔಷಧಿ ಗಳನ್ನು ಖರೀದಿಸಿ ಉಚಿತವಾಗಿ ಅವರ ಮನೆಗೆ ತಲುಪಿಸಿ ಔಷಧಿ ಹಣವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದು, ಈ ಸೇವೆಯನ್ನು ಲಾಕ್ಡೌನ್ ಮುಗಿಯೋವರೆಗೂ ಮುಂದುವರೆಯುತ್ತಿದೆ
ಈ ಸೇವೆಯನ್ನು ಕರೋನಾ ಸೋಂಕಿತರು, ಸಾರ್ವಜನಿಕರು
ಪಡೆದುಕೊಳ್ಳಬೇಕೆಂದು ತಿಳಿಸಿದರು..

ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿಯ ಉಪಾಧ್ಯಕ್ಷರು, ಮಾಜಿ ನಿರ್ದೇಶಕರು ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಚೌಹಳ್ಳಿ ಪುಟ್ಟಸ್ವಾಮೀ, ಸಮಾಜಸೇವಕರಾದ  ಎಳನೀರುರಾಮಣ್ಣ, ಸತ್ಯಮೇವ್ ಜಯತೆ ಅಧ್ಯಕ್ಷ ಶ್ರೀನಿವಾಸ್ ರಾಕಿ, ಯುವ ಕಾಂಗ್ರೆಸ್ಸಿನ ನೇವಲ್ ಅಶೋಕ್, ಫಿಲಂ ಮಂಜು ಮುಂತಾದವರು ಹಾಜರಿದ್ದರು..

Leave a Reply

Your email address will not be published. Required fields are marked *

You cannot copy content of this page