ಮೈಸೂರು ಡಿಸೈನರ್ಸ್ ಅಂಡ್ ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ೨೦೨೨ ರ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು ,
ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಧರ್ಮ ಸಂಸ್ಕೃತ ದಿನಪತ್ರಿಕೆ ಸಂಪಾದಕಿ ಶ್ರೀಮತಿ ಜಯಲಕ್ಷ್ಮಿ ಸಂಪತ್ ಕುಮಾರ್ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು ,
ಸಮಾರಂಭದ ಅಧ್ಯಕ್ಷತೆಯನ್ನು ಎಂ ಡಿ ಪಿ ಎ ಗೌರವಧ್ಯಕ್ಷರಾದ ಆರ್ ವಾಸುದೇವ ಭಟ್ ಅವರು ವಹಿಸಿದ್ದರು,
ಇದೆ ಸಂಧರ್ಭದಲ್ಲಿ ಸುಧರ್ಮ ಸಂಸ್ಕೃತ ದಿನಪತ್ರಿಕೆ ಸಂಪಾದಕಿ ಶ್ರೀಮತಿ ಜಯಲಕ್ಷ್ಮಿ ಸಂಪತ್ ಕುಮಾರ್ ಅವರನ್ನು ಮೈಸೂರು ಡಿಸೈನರ್ಸ್ ಅಂಡ್ ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು,
ಕಾರ್ಯಕ್ರಮದಲ್ಲಿ ನಾಗೇಶ್ , ಪ್ರಸಾದ್, ಗುರು ಪ್ರಸಾದ್ , ಸೇರಿದಂತೆ ಹಲವರು ಉಪಸ್ಥಿತರಿದ್ದರು