ಪ್ರಸಕ್ತ ನವೀಕರಣಗಳು ಮತ್ತು ಸಂತಾನೋತ್ಪತ್ತಿ ತಂತ್ರಜ್ಞಾನ” ಕುರಿತಾದ ರಾಷ್ಟ್ರೀಯ ಸಮಾವೇಶ

ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಏಷ್ಯಾ ಪೆಸಿಫಿಕ್ ಇನ್ಸ್ಟಿಟ್ಯೂಟ್ ಆಫ್ ಎಂಬ್ರೀಯೊಲಜಿ ಆಯೋಜಿಸಿರುವ “ಪ್ರಸಕ್ತ ನವೀಕರಣಗಳು ಮತ್ತು ಸಂತಾನೋತ್ಪತ್ತಿ ತಂತ್ರಜ್ಞಾನ” ಕುರಿತಾದ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು

ಮೈಸೂರಿನ ಏಷ್ಯಾ ಪೆಸಿಫಿಕ್ ಇನ್‌ಸ್ಟಿಟ್ಯೂಟ್ ಆಫ್ ಎಂಬರ್‌ಯಾಲಜಿ (ASPIER) ಕಳೆದ ದಶಕದಿಂದ ಮೈಸೂರಿನ ವಿಶ್ವವಿದ್ಯಾಲಯದ ಅಂಗಸಂಸ್ಥೆಯ ಮೂಲಕ ಕ್ಲಿನಿಕಲ್ ಎಂಬರ್‌ಯಾಲಜಿ ಮತ್ತು ಪ್ರೀ- ಇಂಪ್ಲಾಂಟೇಶನ್‌ನಲ್ಲಿ ಎರಡು ವರ್ಷದ MSc ಕೋರ್ಸ್ ಅನ್ನು ನೀಡುತ್ತಿದೆ.

‘ಕೃತಕ ಗರ್ಭಧಾರಣೆ ತಂತ್ರಜ್ಞಾನ (ART) ಕ್ಷೇತ್ರದಲ್ಲಿ ಜ್ಞಾನ ಹಂಚಿಕೆ ಮತ್ತು ವೃತ್ತಿಪರತೆಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ, ASPIER 2024ರ ನವೆಂಬರ್ 16-17 ರಂದು ಮೈಸೂರಿನ ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ “ನವೀಕರಣಗಳು ಮತ್ತು ಇತ್ತೀಚಿನ ಪ್ರಗತಿಗಳು” ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ

ಈ ಕಾರ್ಯಕ್ರಮವು ವಿಶ್ವವಿದ್ಯಾಲಯದ ಸಹಕಾರದಲ್ಲಿ ನಡೆಯುತ್ತಿದ್ದು. ಐವಿಎಫ್ ಪಯೋನಿಯರ್ ಮತ್ತು ನೋಬೆಲ್ ಪುರಸ್ಕೃತ ಡಾ ರಾಬರ್ಟ್ ಎಡ್ವರ್ಡ್ಸ್ ಅವರ ಶತಮಾನೋತ್ಸವವನ್ನು ಸ್ಮರಿಸುತ್ತಿದೆ ಅವರು ಜುಲೈ 25, 1978 ರಂದು ಪ್ರಪಂಚದ ಮೊದಲ ಐವಿಎಫ್ ಶಿಶುವಿನ ಜನನಕ್ಕೆ ಕಾರಣರಾದರು.

ಪ್ರಮುಖ ಐವಿಎಫ್ ತಜ್ಞರು ಮತ್ತು ಎಂಬರ್‌ಯಾಲಜಿಸ್ಟರು ಇಂದಿನ ಸಮಯಕ್ಕೆ ಪ್ರಸ್ತುತವಾದ ಸಾಂದರ್ಭಿಕ ವಿಷಯಗಳು ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ವಿಚಾರಗೋಷ್ಠಿಯಲ್ಲಿ ಚರ್ಚಿಸಲಿದ್ದಾರೆ.

ಇದೆ ಸಂಧರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ. ಲೋಕನಾಥ್ ಮತ್ತು ಇತರ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page