ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿದ ರಂಗಿತರಂಗ ಖ್ಯಾತಿಯ ನಾಯಕನಟ ನಿರೂಪ್ ಬಂಡಾರಿ

ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ಮೈಸೂರಿನ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು ..

ಚಿತ್ರದ ಹಾಡುಗಳನ್ನು ರಂಗಿತರಂಗ ಖ್ಯಾತಿಯ ನಿರೂಪ್ ಬಂಡಾರಿ ಬಿಡುಗಡೆ ಗೊಳಿಸಿದರು,

ಮೈಸೂರು ಮೂಲದವರಾದ ಅಮೆರಿಕನ್‌ ಪ್ರಜೆ ಯಶಸ್ವಿ ಶಂಕರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ…
ಚಿತ್ರ ಬಿಡುಗಡೆಯ ದಿನಾಂಕವನ್ನು ಆದಷ್ಟು ಬೇಗ ನಿಗದಿಪಡಿಸುತ್ತೇವೆ, ಇದೊಂದು
ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಚಿತ್ರವಾಗಿದೆ ಎಂದು ನಿರ್ದೇಶಕ ಎಂ.ಎನ್‌.ಶ್ರೀಕಾಂತ್‌. ಮತ್ತು ನಿರ್ಮಾಪಕ ಯಶಸ್ವಿ ಶಂಕರ್ ತಿಳಿಸಿದರು..

ಮಂಗಳೂರು, ಮೈಸೂರು, ಬೆಂಗಳೂರು, ಹಾಸನ ಕಡೆಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು
ಸೆಲಬ್ರಿಟಿ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ರಾಘವ್‍ ನಾಯಕನಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರು ಪಾತ್ರಕ್ಕಾಗಿ ಬುಲೆಟ್ ಬೈಕ್‌ ಸವಾರಿ ಕಲಿತು, ಗಟ್ಟಿಗಿತ್ತಿಯಾಗಿ ಕಾಣಿಸಿಕೊಂಡಿದ್ದಾರಂತೆ.

ತೆಲುಗಿನ ಗೋಪಿನಾಥ್‍ ಭಟ್, ಯಮುನಾ ಶ್ರೀನಿಧಿ, ರೇಖಾ, ಜಾನ್, ಪ್ರದೀಪ್‍ ತಿಪಟೂರು, ಚಿರಾಗ್‍ ಗೌಡ, ಗುರುಹೆಗಡೆ ತಾರಾಗಣದಲ್ಲಿದ್ದು,
ಟಾಲಿವುಡ್‍ನ ನವನೀತ್‍ಚರಿ ಸಂಗೀತ ಸಂಯೋಜಿಸಿದ್ದು, ಸಂತೋಷ್‍ ನಾಯಕ್ ಸಾಹಿತ್ಯ ಬರೆದಿರುವ ನಾಲ್ಕು ಹಾಡುಗಳಿಗೆ ಸೋನುನಿಗಮ್, ಅನುರಾಧಾ ಭಟ್ ಮತ್ತು ನವೀನ್‍ ಸಜ್ಜು ಧ್ವನಿಯಾಗಿದ್ದಾರೆ. ಛಾಯಾಗ್ರಹಣ ವಿಶ್ವಜೀತ್‍ರಾವ್, ಸಂಕಲನ ವಿಜೇತ್‍ಚಂದ್ರ, ನೃತ್ಯ ಕಲೈ-ಹರಿಕೃಷ್ಣ ನಿರ್ವಹಿಸಿದ್ದಾರೆ

ಒಟ್ಟಾರೆ ಬಹುತೇಕ ಮೈಸೂರಿಗರೆ ಇರುವಂತಹ ಈ ಚಿತ್ರದ, ಕಥೆ ಸಸ್ಪೆನ್ಸ್ , ಥ್ರಿಲ್ಲರ್ ಆಗಿರುವುದರಿಂದ ಪ್ರೇಕ್ಷಕರ ಮನಮುಟ್ಟುವುದರಲ್ಲಿ ಸಂಶಯವಿಲ್ಲ ..
ಲೋಹಿತ್ ಹನುಮಂತಪ್ಪ ಮೈಸೂರು…

Leave a Reply

Your email address will not be published. Required fields are marked *

You cannot copy content of this page