ಕ್ರಿಕೆಟ್ ಆಯಿತು ಇವಾಗ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಸ್ಪರ್ಧಿಸುತ್ತಿರುವ ಸುದೀಪ್
ಬೆಳ್ಳಿ ತೆರೆ ಮೇಲೆ ಖಳನಾಯಕರ ವಿರುದ್ಧ ಸೆಣೆಸಾಡುತ್ತಿದ್ದ ನಟ ಕಿಚ್ಚ ಸುದೀಪ್, ಇದೀಗ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ನಲ್ಲಿ ಸೆಣಸಾಡಲಿದ್ದಾರೆ..
ಅರೆ ಇದೇನಪ್ಪ ಅಂತ ಯೋಚಿಸ್ತಿದಿರಾ…???!!!
ನಟರಾದ ಅಮೀರ್ ಖಾನ್, ಕಿಚ್ಚ ಸುದೀಪ್, ರಿತೇಶ್ ದೇಶ್‌ಮುಖ್ , ಯಜುವೇಂದ್ರ ಚಹಾಲ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇಂದು ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ಚೆಸ್ ಸ್ಪರ್ಧೆಯಲ್ಲಿ ಎದುರಿಸಲಿದ್ದಾರೆ.
ಕಾರಣ ಇಷ್ಟೇ ಕೋವಿಡ್‌ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ವಿಶ್ವನಾಥನ್ ಆನಂದ್ ಅವರು ಇತರ ಕೆಲವು ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸೆಲೆಬ್ರಿಟಿಗಳ ವಿರುದ್ಧ ಚೆಸ್ ಆಡಲಿದ್ದಾರೆ.
ಆಟವಾಡುವ ಮೂಲಕ ದೇಣಿಗೆ ಸಂಗ್ರಹ ಮಾಡಲಿದ್ದಾರೆ.
ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್.ಕಾಮ್ ‘ಚೆಕ್‌ಮೇಟ್ ಕೋವಿಡ್’ ಸೆಲೆಬ್ರಿಟಿ ಆವೃತ್ತಿಯನ್ನು ನಡೆಸುತ್ತಿದ್ದು ಇಂದು ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಐದು ಬಾರಿ ವಿಶ್ವಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರು ಎರಡು ಬ್ಯಾಚ್‌ಗಳಲ್ಲಿ ಅರ್ಧ ಗಂಟೆಗಳಂತೆ ಹಲವು ಗಣ್ಯರೊಂದಿಗೆ ಏಕಕಾಲದಲ್ಲಿ ಚೆಸ್ ಆಡಲಿದ್ದಾರೆ.
ಕನ್ನಡದ ಕಿಚ್ಚ ಸುದೀಪ್ ಅಲ್ಲದೇ ಅಮೀರ್ ಖಾನ್, ರಿತೇಷ್ ದೇಶ್‌ಮುಖ್ ಕ್ರಿಕೆಟ್ ಆಟಗಾರ ಯಜುವೇಂದ್ರ ಚಾಹಲ್, ಗಾಯಕಿ ಅನನ್ಯಾ ಬಿರ್ಲಾ, ಗಾಯಕ ಅರ್ಜಿತ್ ಸಿಂಗ್, ನಿರ್ಮಾಪಕ ಸಾಜಿದ್ ಕೂಡ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ಆಡಲಿದ್ದಾರೆ.
ಈ ಸ್ಪರ್ಧೆಯ ನಂತರ ಸ್ಪರ್ಧಿಗಳೊಂದಿಗೆ ಆನಂದ್ ಸಂವಾದವನ್ನೂ ನಡೆಸಲಿದ್ದಾರೆ. ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಇದನ್ನು ಆಯೋಜಿಸಲಾಗುತ್ತಿದೆ. ಚೆಸ್‌ಕಾಮ್ ಇಂಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ನೇರಪ್ರಸಾರವಿರಲಿದೆ.
ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸುವ
ಸದುದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯ…