ಅನಗತ್ಯವಾಗಿ ಹೊರ ಬಂದವರನ್ನು ಹಿಡಿದಿದ್ದಕ್ಕೆ ಬಿಡಿಸಲು ಬಂದವರಿಗೆ ಪಟ್ಟಣ ಠಾಣೆಯ ಪಿಐ ಕೈ ಮುಗಿದ ಘಟನೆ ನಡೆದಿದೆ.
ಅವಳಿ ನಗರಗಳಾದ ವಿಜಯನಗರ ಮತ್ತು ಬಳ್ಳಾರಿ ನಗರಗಳಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಬಳ್ಳಾರಿ ಜಿಲ್ಲಾಡಳಿತ 5 ದಿನಗಳ ಕಾಲ ಸಂಪೂರ್ಣ ಜನ ಸಂಚಾರಕ್ಕೆ ನಿರ್ಭಂದಿಸಲಾಗಿದೆ.
ನಗರದಲ್ಲಿ ಗುರುವಾರ ಅನಗತ್ಯವಾಗಿ ಹೊರ ಬಂದವರನ್ನು ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನಗರದ ಉದ್ಯೋಗ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು
ಈ ವೇಳೆ ಸಾರ್ ನಮ್ಮ ತಮ್ಮನನ್ನು ಬಿಡಿ ಸರ್ ಎಂದು ಹೊಸಪೇಟೆಯ ವ್ಯಾಪಾರಿ ಕೇಳಿದ್ದಾನೆ.
ಇದಕ್ಕೆ ಪ್ರತಿಯಾಗಿ ಪಟ್ಟಣದ ಪಿಐ “ದಯಮಾಡಿ ನಿಮಗೆ ಕೈ ಮುಗಿದು ಕೇಳುವೆ ಜನರನ್ನು ಬದುಕಿಸಿ ನಿಮಗೆ ದುಡ್ಡು ಬೇಕು, ನಮಗೆ ಜನ ಬೇಕು ನಾವು ಕೂಡ ಹೆಂಡ್ತಿ ಮಕ್ಕಳನ್ನು ಬಿಟ್ಟು ಸಮಾಜಕ್ಕಾಗಿ ಬಂದಿದ್ದೇವೆ” ಎಂದರು.
ದಯಮಾಡಿ ಜನ ಬದುಕಬೇಕು, ಸಮಾಜ ಉಳಿಯಬೇಕು ಎಂದು ಪಿಐ ಶ್ರೀನಿವಾಸ ರವರು ಕೈ ಮುಗಿದು ಬೇಡಿಕೊಂಡರು.