ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸಿಗರ ನೆಚ್ಚಿನ ತಾಣ , ಈ ಕೊರೊನಾ ಹಾವಳಿಯಲ್ಲಿ ,
ಪ್ರವಾಸಿಗರು ಇನ್ನೂ ಮೈಸೂರಿಗೆ ಪ್ರವಾಸಿಗರು ಬರುವ ಮಾತು ಇನ್ನೂ ತುಂಬಾನೇ ದೂರ ಇದೆ ,
ಇಂದಿನಿಂದ ೧೪ ದಿನಗಳ ಲಾಕ್ ಡೌನ್ ಜಾರಿಯಾಗಿದ್ದು
ಇನ್ನೂ ಮೈಸೂರಿನ ಟಾಂಗಾ ವಾಲಗಳ ಸ್ಥಿತಿ ಅಂತೂ ಹೇಳತೀರದು,
ಕುದುರೆಗಳ ಲಾಲನೆ ಪಾಲನೆಗೆ ಸಾಕಷ್ಟು ಹಣ ಖರ್ಚುಗುವುದರಿಂದ ಅದಕ್ಕೆ ಹಣ ವೊದಗಿಸಲು ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ,
ಸಂಪಾದನೇ ಮಾಡಿದರೂ ಕುದುರೆಗಳ ಆರೈಕೆಯು ಕಷ್ಟ ಸಾಧ್ಯ ಇದನ್ನು ಅರಿತ ವರ್ದನ್ ಎಂಟರ್ಪ್ರೈಸಸ್ ನ ಹರ್ಷವರ್ಧನ್ ಅವರು
ಕುದರೆಗಳಿಗೆ
ಹುಲ್ಲು , ಮತ್ತು ಅದಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ವಿತರಿಸಿದರು ,
ಅದೇ ರೀತಿ ಬೆಳಗೊಳ ಸರ್ಕಾರಿ ಪ್ರಾಥಮಿಕ ಕೇಂದ್ರಕ್ಕೆ ಸ್ಯಾನಿಟೈಸರ್, ಮಾಸ್ಕ್ , ಸೇರಿದಂತೆ ಇನ್ನಿತರ ವೈದ್ಯಕೀಯ ಸಾಮಾಗ್ರಿಗಳನ್ನು ಸಹ ವಿತರಿಸಲಾಯಿತು,
ಈ ರೀತಿಯ ಕಾರ್ಯಗಳಿಂದ ಇನ್ನಷ್ಟು ಯುವಕರು ಸಮಾಜಿಕ ಕಾರ್ಯ ಮಾಡಲು ಮುಂದೆ ಬರುವಂತಾಗುತ್ತದೆ , ಹರ್ಷವರ್ಧನ್ ಗೌಡರ ಈ ಸೇವೆ ನಿಜಕ್ಕೂ ಶ್ಲಾಘನೀಯ,
ಇದೆ ಸಂಧರ್ಭದಲ್ಲಿ ಚರಣ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.