ಎಸ್ ಎಂ ಪಿ ಫೌಂಡೇಶನ್ ನ ಯುವ ಮುಖಂಡ ಎಸ್ ಎಂ ಪಿ ಶಿವಪ್ರಕಾಶ್ ಅವರ ಹುಟ್ಟುಹಬ್ಬವನ್ನು ಎಪಿಎಂಸಿ ಯ ದಪ್ಪ ಮೆಣಸಿನಕಾಯಿ ರವಿಗೌಡ ಅವರು ತಿಲಕ್ ನಗರದಲ್ಲಿರುವ ಸರ್ಕಾರಿ ಅಂಧರ ಶಾಲೆಯಲ್ಲಿ ಆಚರಿಸಿದರು,
ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿ , ೩೦ ಮಕ್ಕಳಿಗೆ ಸಮವಸ್ತ್ರ, ಶಾಲೆಗೆ ಹದಿನೈದು ಸಾವಿರ ರೂಗಳ ಸಹಾಯಧನವನ್ನು ನೀಡಿದರು ಮತ್ತು ಮದ್ಯಾನದ ಊಟದ ವ್ಯವಸ್ಥೆಯನ್ನು ರವಿಗೌಡ ಅವರು ನೆರವೇರಿಸಿದರು,
ರಾಮೇಗೌಡ ಮಾತನಾಡಿ ಡಾ.ರಾಜ್ ಕುಮಾರ್ ನೇತ್ರದಾನ ಮಾಡಿದ್ರು.ಅವರ ಆದಿಯಲ್ಲಿಯೇ ಪುನೀತ್ ರಾಜ್ ಕುಮಾರ್ ರವರು ನಿಧನರಾದಾಗ ತಮ್ಮ ಕಣ್ಣು ದಾನ ಮಾಡಿ ನಾಲ್ಕು ಜನರಿಗೆ ದೃಷ್ಠಿ ಕೊಟ್ಟಿದ್ದಾರೆ.
ಇಂದು ನೂರಾರು ಮಂದಿ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ.ಮುಂದಿನ ದಿನದಲ್ಲಿ ಅಂಧ ಮಕ್ಕಳಿಗೂ ದೃಷ್ಠಿ ಸಿಗಲಿದೆ ಎಂದರು,
ದಪ್ಪ ಮೆಣಸಿನಕಾಯಿ ರವಿ ಮಾತನಾಡಿ ಪ್ರತಿ ವರ್ಷ ಬಂಡಿಪಾಳ್ಯದಲ್ಲಿ ದುಂದು ವೆಚ್ಚ ಮಾಡಿ ಹುಟ್ಟು ಹಬ್ಬ ಆಚರಿಸುತ್ತಿದ್ದೇವು.ಈ ವರ್ಷ ಅಂಧ ಮಕ್ಕಳ ಜೊತೆ ಶಿವಪ್ರಕಾಶ್ ರವರ ಹುಟ್ಟು ಹಬ್ಬ ಆಚರಿಸಲು ಮುಂದಾಗಿದ್ದು ನಮಗೆ ಖುಷಿ ತಂದಿದೆ ಎಂದರು.
ಈ ತಿಲಕ್ ನಗರದಲ್ಲಿರುವ ಸರ್ಕಾರಿ ಶಾಲೆಗೆ ಇನ್ನುಮುಂದೆ ಬೇಕಾಗುವ ತರಕಾರಿಯನ್ನು ನಾನು ಉಚಿತವಾಗಿ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು,
ಇದೆ ಸಂಧರ್ಭದಲ್ಲಿ ಎ ಪಿ ಎಂ ಸಿ ಅಧ್ಯಕ್ಷ ಬಸವರಾಜು ,
ಪಾಲಿಕೆ ಸದಸ್ಯ ಸುನೀಲ್,
ದಿನೇಶ್,ರಾಮೇಗೌಡ, ವೇದ ಮೂರ್ತಿ,
ಪೈಲ್ವಾನ್ ಮಂಜುನಾಥ್ ಸಿಂಗ್,ಅಂಧ ಮಕ್ಕಳ ಶಾಲೆಯ ಅಧೀಕ್ಷಕರಾದ ಸತೀಶ್,ವೇಣು, ಸಂತೋಷ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.