ವರದಿ : ಲೋಹಿತ್ ಹನುಮಂತಪ್ಪ ಮೈಸೂರು.
ಕೊರೊನಾ ಮಹಾಮಾರಿ ಇಂದ ನಿಜಕ್ಕೂ ಸಮಸ್ಯೆ ಎದುರಿಸುತ್ತಿರುವುದು ದಿನಗೂಲಿ ನೌಕರರು,
ಹಾಗೇಯೇ ಸಿನಿ ಕಾರ್ಮಿಕರು ,
ಸಿನಿಮಾ ವನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಕಾರ್ಮಿಕರು ಇಂದು ಅಕ್ಷರಶಃ ಪರದಾಡುತ್ತಿದ್ದಾರೆ..
ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಈ ತೊಂದರೆ ತಪ್ಪಿದ್ದಲ್ಲ ..
ಇಂದು ಮೈಸೂರಿನ ಸಿನಿಮಾ ಜೂನಿಯರ್ ಕಲಾವಿದರಿಗೆ ಉಪೇಂದ್ರ ಮತ್ತು ದಾನಿಗಳು ಆಹಾರ ಕಿಟ್ ಜೊತೆಗೆ ತರಕಾರಿಗಳನ್ನು ವಿತರಿಸಲಾಯಿತು,
![](https://news84kannada.com/wp-content/uploads/2021/05/IMG-20210518-WA0064-1024x682.jpg)
ನಗರದ ಗನ್ ಹೌಸ್ ಶಂಕರ ಮಠದ ಪಕ್ಕದ ಕಲ್ಯಾಣ ಮಂಟಪದಲ್ಲಿ ಜೂನಿಯರ್ ಕಲಾವಿದರ ಸಂಘದ ಮೈಸೂರು ಶಿವು ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು,
ಇದೆ ಸಂಧರ್ಭದಲ್ಲಿ ಮಾತಾನಾಡಿದ ಎಲ್ಲಾ ಕಲಾವಿದರು ಈ ಕೊರೊನಾ ಸಂಧರ್ಭದಲ್ಲಿ ನಾವು ಜೀವನ ನಡೆಸುವುದೇ ಕಷ್ಟಕರವಾಗಿದೆ , ಇಂತಹ ಪರಿಸ್ಥಿತಿಯಲ್ಲಿ ಉಪೇಂದ್ರ ಅವರು ನಮ್ಮ ನೆರವಿಗೆ ಧಾವೀಸಿದ್ದಾರೆ, ಅವರು ನೂರಾರು ಕಾಲ ಚೆನ್ನಾಗಿರಲಿ ಎಂದು ಕಣ್ಣೀರಿಟ್ಟರು….
![](https://news84kannada.com/wp-content/uploads/2021/05/IMG_20210518_202223.jpg)
ಚಿತ್ರರಂಗದಲ್ಲಿ ಕೋಟಿ ಕೊಟಿ ಸಂಭಾವನೆ ಪಡೆಯುತ್ತಿರುವ ಇನ್ನಷ್ಟು ಕಲಾವಿದರು ಈ ಬಡ ಕಲಾವಿದರಿಗೆ ನೆರವಿನ ಹಸ್ತ ಚಾಚಿದರೆ ಅವರನ್ನು ಕಷ್ಟ ಕಾಲದಲ್ಲಿ ಕೈ ಹಿಡಿದಂತಾಗುತ್ತಾದೆ,..
ಇಂತಹ ಸಂಧರ್ಭದಲ್ಲಿ ತೀವ್ರ ಸಂಕಷ್ಟದಲ್ಲಿರುವವರಿಗೆ ಉಳ್ಳವರು ನೆರವಿನ ಹಸ್ತ ಚಾಚಬೇಕು ….
ಉಪೇಂದ್ರ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ , ಅವರು ನಿಜಕ್ಕೂ ರಿಯಲ್ ಸ್ಟಾರ್..