ಸಂತ ಫಿಲೋಮಿನಾ ಕಾಲೇಜು: ಹತ್ತನೇ ಘಟಿಕೋತ್ಸವದ ಸಡಗರ

ಕಳೆದ ಹತ್ತು ವರ್ಷಗಳಿಂದ ಅವಿರತವಾಗಿ ನಡೆಯುತ್ತಿರುವ ಈ ಪದವಿ ಪ್ರದಾನವು ಶೈಕ್ಷಣಿಕ ಅತ್ಯುತ್ತಮ ಸಾಧನೆಗಳು ಮತ್ತು ಬೆಳವಣಿಗೆಗಳನ್ನು ಗೌರವಿಸುವ ಮಹತ್ವದ ಘಟ್ಟವಾಗಿದೆ. ಸಂತ ಫಿಲೋಮಿನಾ ಕಾಲೇಜು 1946 ರಿಂದ ಶಿಕ್ಷಣದ ಮೂಲಾಧಾರವಾಗಿದ್ದು, 2011ರಲ್ಲಿ ಸ್ವಾಯತ್ತ ಸ್ಥಾನಮಾನವನ್ನು ಪಡೆದ ನಂತರ ಹತ್ತು ವರ್ಷಗಳ ಸ್ವಾಯತ್ತ ಘಟಿಕೋತ್ಸವಗಳನ್ನು ಸ್ವಯಂ – ನಿರ್ದೇಶಿತ ಆಚರಣೆಗಳನ್ನು ಯೋಜಿಸಲಾಗುತ್ತಿದೆ.

ಶ್ರೀಮತಿ ಎಂ.ಎಫ್.ಫೆಬಿನ್, ಮುಖ್ಯಸ್ಥರು, ಕಾಲೇಜು ಕನೆಕ್ಟ್, ಲಾರ್ಸನ್ & ಟೊಬ್ರ ಎಜುಕೇಶನ್ ಟೆಕ್ನಾಲಜಿ, ಚೆನ್ನೈ, ಅವರು ಈ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರೊ. ಲೋಕನಾಥ್, ಎನ್.ಕೆ.. ಕುಲಪತಿಗಳು, ಮೈಸೂರು ವಿಶ್ವವಿದ್ಯಾಲಯ, ಇವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹತ್ತನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ಡಾ. ಬರ್ನಾರ್ಡ್ ಮೊರಾಸ್, ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ವಹಿಸಲಿದ್ದಾರೆ: ಶ್ರೇಷ್ಠ ಗುರುಗಳಾದ ಅಲೈಡ್ ಜಾನ್ ಮೆಂಡೋನ್ಸಾ, ವಂದನೀಯ ಗುರುಗಳಾದ ಡಾ. ಲೂರ್ದು ಪ್ರಸಾದ್ ಜೋಸೆಫ್, ರೆಕ್ಟರ್, ಸೇಂಟ್ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ.ಗುರುಗಳಾದ ಜ್ಞಾನ ಪ್ರಗಾಸಂ, ಸಹಾಯಕ ಗುರುಗಳಾದ ಡೇವಿಡ್ ಸಗಾಯ ರಾಜ್, ಪ್ರಾಂಶುಪಾಲರಾದ ರವಿ ಜೆ ಡಿ ಸಲ್ದಾನ್ಹಾ ಸೇರಿದಂತೆ ಕಾಲೇಜಿನ ಅನೇಕ ಶೈಕ್ಷಣಿಕ ಮುಖ್ಯಸ್ಥರು ಮತ್ತು ಗಣ್ಯರು ಭಾಗವಹಿಸಿದ್ದರು

ಈ ಘಟಿಕೋತ್ಸವದಲ್ಲಿ 611 ಅಭ್ಯರ್ಥಿಗಳು (409 ಪದವಿ ಮತ್ತು 202 ಸ್ನಾತಕೋತ್ತರರು) ಪದವಿಯನ್ನು ಸ್ವೀಕರಿಸಲಿದ್ದಾರೆ. ಇವರಲ್ಲಿ 48 ಪದವೀಧರರು ತಮ್ಮ ಅಸಾಧಾರಣ ಸಾಧನೆಗಾಗಿ ಚಿನ್ನದ ಪದಕಗಳನ್ನು ಪಡೆದುಕೊಂಡರು,

Leave a Reply

Your email address will not be published. Required fields are marked *

You cannot copy content of this page