ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಸಂಚಿತ್ ಸಂಜೀವ್ ಈಗ ನಟನೆಗೆ ಸಿದ್ಧರಾಗುತ್ತಿದ್ದಾರೆ.
ಸುದೀಪ್ ಅಕ್ಕನ ಮಗ ಆಗಿರುವ ಅವರು ತಮ್ಮ ಮುಂದಿನ ಚಿತ್ರಕ್ಕೆ ಮುಂಬಯಿಯಲ್ಲಿ ತಯಾರಿ ನಡೆಸಿದ್ದಾರೆ..
ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ ಮತ್ತು ಮುಂದಿನ ಚಿತ್ರಕ್ಕೆ ಫಿಟ್‌ನೆಸ್ ಮೇಂಟೇನ್ ಮಾಡುತ್ತಿದ್ದಾರಂತೆ.
ಸಖತ್ ತಯಾರಿ ಮಾಡಿಕೊಂಡೆ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ಸಂಚಿತ್, ನ್ಯೂಯಾರ್ಕ್‌ನ ಫಿಲ್ಮ್ ಅಕಾಡೆಮಿಯಲ್ಲಿ ಕೋರ್ಸ್ ಮಾಡಿದ್ದಾರೆ. ಈ ಹಿಂದೆ ಸಂಚಿತ್ ಸಂಜೀವ್ ಕಿರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಇವರ ಮೊದಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಒಂದಾನೊಂದು ದಿನ’ ಕಿರುಚಿತ್ರ ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಯುಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಮತ್ತು ಸುಧಾಬೆಳವಾಡಿ ನಟಿಸಿದ್ದು, ಅಮ್ಮ ಮಗಳ ಬಾಂಧವ್ಯದ ಕತೆಯನ್ನು ಇದು ಆಧರಿಸಿತ್ತು..
ಮೈಸೂರಿನಲ್ಲಿಯೂ ಅವರ ಅಭಿಮಾನಿಗಳಿದ್ದು ಸಂಚಿತ್ ಸುಜೀವ್ ಅಭಿಮಾನಿ ಬಳಗದ ಮುಖಾಂತರ ಅಧ್ಯಕ್ಷ ಚೇತನ್ ಅವರ ನೇತೃತ್ವದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದು ಮೈಸೂರಿನಲ್ಲಿ ಸಂಚಿತ್ ಅಭಿಮಾನಿಗಳು ಅವರಿಗೆ ಶುಭ ಆರೈಸಿದ್ದಾರೆ….