ಮೈಸೂರು ಸಿಂಗಿಂಗ್ ಐಕಾನ್ ೨೦೨೨ ಗ್ರ್ಯಾಂಡ್ ಫಿನಾಲೆಗೆ ಹಿರಿಯ ಹಾಸ್ಯ ಕಲಾವಿದ ದೊಡ್ಡಣ್ಣ ಚಾಲನೆ

ಮೈಸೂರಿನ ವಿಶ್ವೇಶ್ವರನಗರ ಇಂಡಸ್ಟ್ರಿಯಲ್ ಸಬರ್ಬ್ ನಲ್ಲಿರುವ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಸೆಂಟರ್ ಆಡಿಟೋರಿಯಂ ನಲ್ಲಿ
ಸಿಂಗಿಂಗ್ ಐಕಾನ್ ೨೦೨೨
ಗ್ರ್ಯಾಂಡ್ ಫಿನಾಲೆ ಸಂಗೀತ ಕಾರ್ಯಕ್ರಮ ನಡೆಯಿತು.

ರೋಟರಿ ಮೈಸೂರು ಸಂಸ್ಥೆ ಮೈಸೂರು 3181 ಮತ್ತು ಮೈಸೂರು ಮ್ಯೂಸಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿದ್ದ
ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣನವರು ಚಾಲನೆ ನೀಡಿದರು.

ನಂತರ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಹಾಸ್ಯ ಕಲಾವಿದ ದೊಡ್ಡಣ್ಣ ಸನ್ಮಾನಿಸಿ ಗೌರವಿಸಿದರು.

ಕೋರೋನಾ ಹಿನ್ನೆಲೆ ಆನ್ ಲೈನ್ ಮೂಲಕ ಸ್ಪರ್ದೇ ನಡೆಯಿತು.ರಾಜ್ಯಾದ್ಯಂತ 200 ಮಕ್ಕಳು ಭಾಗವಹಿಸಿದ್ರು.
4 ಸುತ್ತು ನಡೆಸಿ ಸ್ಪರ್ಥಿಗಳನ್ನು ಆಯ್ಕೆ ಮಾಡಿದ್ದೇವೆ.ಅದರಲ್ಲಿ 15 ಜನರು ಭಾಗವಹಿಸಿದ್ದಾರೆ.

ಸಂಸ್ಥೆಯಿಂದ ಇದೇ ಮೊದಲ ಬಾರಿಗೆ ಸ್ಪರ್ದೇ ನಡೆಯುತ್ತಿದೆ ವಿಜೇತರಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂಗೀತಗಾರರು ವಿಜೇತರಿಗೆ ಅವಕಾಶ ನೀಡಲಿ ಎಂಬುದು ನಮ್ಮ ಆಶಯ.ಗೆದ್ದವರಿಗೆ
ರೋಟರಿ ಪಾಪ್ಯುಲರ್ ಐಕಾನ್ ಪ್ರಶಸ್ತಿ ನೀಡುತ್ತಿದ್ದೇವೆ.ಮತ್ತೆ ಮೊದಲ ನಾಲ್ಕು ವಿಜೇತರಿಗೆ ರೋಟರಿ ಮೈಸೂರು ಅ್ಯಂತಂಗೆ ಹಾಡಲು ಅವಕಾಶ ನೀಡುತ್ತಿದ್ದೇವೆ ಎಂದು ರೋಟರಿ ಮೈಸೂರಿನ ಅಧ್ಯಕ್ಷ
ರಾಮಚಂದ್ರರಾಜೇ ಅರಸ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಅನ್ನಪೂರ್ಣ ಶ್ರೀಕಾಂತ್ , ಮನೋಹರ್ ಎಂ ಸಿ ಎಸ್ , ಸುಬ್ರಹ್ಮಣ್ಯ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page