ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭವಾಗಿರುವ ದೊನ್ನೆ ಬಿರಿಯಾನಿ ಪ್ಯಾಲೇಸ್ ಹೋಟೆಲ್ ಗೆ ಭೇಟಿ ನೀಡಿದ ಶಿವಣ್ಣ

ಮೈಸೂರಿನ ಕಾಳಿದಾಸ ರಸ್ತೆ ವಿಜಯನಗರ ಮೊದಲ ಹಂತದಲ್ಲಿರುವ ದೊನ್ನೆ ಬಿರಿಯಾನಿ ಪ್ಯಾಲೇಸ್ ಗೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿ ಮಾಲಿಕರಾದ ಸಚಿನ್ ವರುಣ್ ಗೌಡರವರಿಗೆ ಬಿರಿಯಾನಿ ತಿನ್ನಿಸಿ
ಶುಭ ಕೋರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ ಸಚಿನ್,ವರುಣ್ ನಮ್ಮ ಆಪ್ತರು ಅವರು ದೊನ್ನೆ ಬಿರಿಯಾನಿ ಹೋಟೆಲ್ ಆರಂಭಿಸಿದ್ದಾರೆ.
ಈ ಮಧ್ಯಾಹ್ನ ಊಟ ಇಲ್ಲಿಂದಲೇ ಪಾರ್ಸಲ್ ಬಂದಿತ್ತು.
ಇಲ್ಲಿನ ಊಟ ಚೆನ್ನಾಗಿರುತ್ತದೆ ಗ್ರಾಹಕರು ಇಲ್ಲಿನ ರುಚಿ ಸವಿಯಬೇಕು ಎಂದರು.

ಶಕ್ತಿಧಾಮ ಆರಂಭಿಸಿದ್ದು ನನ್ನ ತಾಯಿ ತಂದೆ ಈಗ ಅದರ ಜವಾಬ್ದಾರಿ ಗೀತಾಳಿಗೆ ಕೊಡಲಾಗಿದೆ.

ಮೈಸೂರಿನಲ್ಲಿ ಚಿತ್ರೀಕರಣ ಮಾಡೋದು ತುಂಬ ಖುಷಿಕೊಡುತ್ತದೆ.
ನಮ್ಮ ಅದೃಷ್ಟದ ಸ್ಥಳ ಮೈಸೂರು, ರಥಸಪ್ತಮಿಯಿಂದ ಹಿಡಿದು ಮನಮೆಚ್ಚಿದ ಹುಡುಗಿ,ಸಿಂಹದ ಮರಿ ಸಾಕಷ್ಟು ಸಿನಿಮಾ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ.ಪುನೀತ್ ರಾಜ್ ಕುಮಾರ್ ಇಲ್ಲ ಅಂತ ಹೇಳೋಕೆ ಮನಸ್ಸಿಗೆ ನೋವಾಗುತ್ತದೆ ಎಂದರು,

ಇನ್ನೂ ಪಡುವಾರಹಳ್ಳಿಯಲ್ಲಿ ಪುನೀತ್ ಪ್ರತಿಮೆ ನಿರ್ಮಿಸುತ್ತಿದ್ದೇವೆ ಅಂತ ಅಭಿಮಾನಿಗಳು ಹೇಳಿದ್ರು.
ಆದರೆ ಪುನಿತ್ ಪ್ರತಿಮೆ ನೋಡೋಕೆ ನನಗೆ ಇಷ್ಟ ಇಲ್ಲ ಯಾಕಂದ್ರೇ ನಾನು ನನ್ನ ತಮ್ಮನನ್ನ ಕಲ್ಲಾಗಿ ನೋಡೋಕೆ ಇಷ್ಟ ಪಡೋದಿಲ್ಲ.

ಆತ ಜೀವಂತವಾಗಿ ನಮ್ಮಲ್ಲೇ ಇದ್ದಾನೆ ಇಷ್ಟು ಬೇಗ ಕಲ್ಲು ಮಾಡೋಕೆ ಇಷ್ಟ ಇಲ್ಲ ಎಂದು ಪುನಿತ್ ನೆನೆದು ಭಾವುಕರಾದರು,

ಊಟ ಬಟ್ಟೆ ಕೊಡಬಹುದು ಆದರೇ ಖುಷಿ ಕೊಡೋಕಾಗಲ್ಲ ಗಣರಾಜ್ಯೋತ್ಸವ ಆಚರಣೆ ನಂತರ ಶಕ್ತಿಧಾಮದ ಮಕ್ಕಳ ಜೊತೆ ಬಸ್ ರೈಡ್ ಹೋಗಿದ್ದೇ ಅವರ ಜೊತೆ ಕಳೆದ ಸಮಯ ಅಮೂಲ್ಯವಾದದ್ದು ಎಂದರು.

ಮೂರು ಮಕ್ಕಳು ಒಂದೇ ಚಿತ್ರದಲ್ಲಿ ನಡೆಸಬೇಕೆಂದು ಪಾರ್ವತಮ್ಮ ರಾಜ್ ಕುಮಾರ್ ಕನಸು ಈಡೇರಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಅಪ್ಪಾಜಿ ಅಮ್ಮ ಯಾವಾಗಲೂ ಹೇಳುತ್ತಿದ್ದರೂ ನಾವು ಅಂದುಕೊಂಡ ಹಾಗೇ ಏನು ಆಗೋದಿಲ್ಲ ಕಂದ ಎಂದು,
ಅಪ್ಪು ಇಲ್ಲ ಅಂತ ಹೇಳೋಕೆ ಕಷ್ಟ ಆಗುತ್ತದೆ , ಪುನೀತ್ ಜೇಮ್ಸ್‌ ಚಿತ್ರದಲ್ಲಿ ಡಬ್ಬಿಂಗ್ ಮಾಡುತ್ತಿದ್ದೇವೆ ಪುನೀತ್ ವಾಯ್ಸ್ ಡಬ್ ಮಾಡೋದು ಕಷ್ಟನೇ ಆಗಿದೆ ಎಂದರು,

ಮಧ್ಯಾನ ಮೈಸೂರಿನಲ್ಲಿ ನಡೆಯುತ್ತಿರುವ ಭೈರಾಗಿ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಸಚಿನ್ ಗೌಡರ ದೊನ್ನೆ ಬಿರಿಯಾನಿ ಪ್ಯಾಲೇಸ್ ನಿಂದ ಶಕ್ತಿಧಾಮದ ಮಕ್ಕಳಿಗೆ ಬಿರಿಯಾನಿಯನ್ನು ವಿತರಿಸಲಾಯಿತು,
ಸ್ವತಃ ಶಿವಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಮಕ್ಕಳಿಗೆ ಊಟ ಬಡಿಸಿದರು

ಮಾಲೀಕರಾದ
ಸಚಿನ್ ,ವರುಣ್ ಗೌಡ ಮಾತನಾಡಿ ಈ ದೊನ್ನೆ ಬಿರಿಯಾನಿ ಪ್ಯಾಲೇಸ್ ಉದ್ಘಾಟನೆಯನ್ನ ಶಿವಣ್ಣ ಮಾಡಬೇಕಿತ್ತು ಪುನೀತ್ ರವರು ಸಾವನ್ನಪ್ಪಿದ್ದರಿಂದ ಬಂದಿರಲಿಲ್ಲ , ಇವತ್ತು ಬಂದು ಶುಭ ಹಾರೈಸಿದ್ದಾರೆ , ಪ್ರತಿ ಭಾನುವಾರ ನಮ್ಮ ಹೋಟೆಲ್ ನಿಂದ ಊಟ ಪಾರ್ಸಲ್ ಆಗ್ತಿತ್ತು. ಮೈಸೂರಿನಲ್ಲಿ 1 ಶಾಖೆ ಇದೆ.ಬೆಂಗಳೂರಿನಲ್ಲಿ 8 ಶಾಖೆಗಳಿವೆ.ಚಿಕನ್ ನಲ್ಲಿ 5 ತರ ,ಮಟನ್ ನಲ್ಲಿ 3 ತರ ವೆರೈಟ್ ಊಟ ದೊರೆಯುತ್ತೆ.80 ಜನ ಕೆಲಸಗಾರರಿದ್ದಾರೆ.
ಎಲ್ಲಾ ಕನ್ನಡದವರೇ ಆಗಿದ್ದಾರೆ.
ಎಲ್ಲಾ ತರದ ಜನರಿಗೆ ಇಲ್ಲಿ ಕಡಿಮೆ ಬೆಲೆಯಲ್ಲಿ ರುಚಿಯಾಗಿ ಊಟ ಬಡಿಸಲಿದ್ದೇವೆ ಅದಲ್ಲದೇ ಪಾರ್ಸಲ್ ವ್ಯವಸ್ಥೆ ಕೂಡ ಇದೆ ಎಂದರು…

Leave a Reply

Your email address will not be published. Required fields are marked *

You cannot copy content of this page