ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಇದೀಗ ಶ್ರೀರಾಮ್ ಫೈನಾನ್ಸ್ ನ ಬ್ರಾಂಡ್ ಅಂಬಾಸಿಡರ್

ಶ್ರೀರಾಮ್ ಗ್ರೂಪ್‌ ನ ಪ್ರಮುಖ ಕಂಪನಿ ಮತ್ತು ಭಾರತದ ಪ್ರಮುಖ ಹಣಕಾಸು ಸೇವಾ ಪೂರೈಕೆದಾರರಲ್ಲಿ ಒಂದಾಗಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ತನ್ನ ಬ್ರಾಂಡ್ ರಾಯಭಾರಿ, ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಕಾಣಿಸಿಕೊಂಡಿರುವ “ಜೊತೆಯಾಗಿರಿ, ಉನ್ನತಿಗೇರಿ” ಎಂಬ ಹೊಸ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಿದೆ.
ಪ್ರಸ್ತುತ ಬಹುತೇಕ ಭಾರತೀಯರು ಸಾಧನೆಯ ಪಥದಲ್ಲಿ ಸಾಗುವಾಗ ಎದುರಾಗುವ ಸವಾಲುಗಳಿಗೆ ‘ಸಾ ವಾಟ್?’ ಎಂಬಂತೆ ಇರುತ್ತಾರೆ. ಈ ಹೊಸ ಜಾಹೀರಾತು ಅದೇ ಮನಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಮೂಡಿ ಬಂದಿದೆ. ಈ ಜಾಹೀರಾತಿನ ಮೂಲಕ ಸಂಸ್ಥೆಯು ನೀಡಿರುವ ಸಂದೇಶವು ಹೀಗಿದೆ- ‘ನಾವು ಜೊತೆಯಾಗಿದ್ದಾಗ, ಉನ್ನತಿಗೇರುತ್ತೇವೆ. ಗ್ರಾಹಕರ ಜೊತೆಗೆ ಬಲವಾದ ಬಾಂಧವ್ಯ ನಿರ್ಮಿಸುವ ಮೂಲಕ, ನಾವು ಅವರ ಸಂಪೂರ್ಣ ಸಾಮರ್ಥ್ಯ ಬಳಸಿಕೊಂಡು ಕೆಲಸ ಮಾಡಲು ಮತ್ತು ಅವರ ಕನಸುಗಳನ್ನು ನನಸು ಮಾಡಲು ಹಾಯ ಮಾಡುತ್ತೇವೆ’.
ಶ್ರೀರಾಮ್ ಫೈನಾನ್ಸ್ – #TogetherWeSoar | #ಜೊತೆಯಾಗಿರಿ, ಉನ್ನತಿಗೇರಿ | (ಕನ್ನಡ)-

https://bit.ly/tws_k

ಪ್ರಚಾರ ಅಭಿಯಾನದ ಹಿಂದೆ ಸ್ಟಾರ್ ಪವರ್
ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಈ ಜಾಹೀರಾತಿನಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀರಾಮ್ ಫೈನಾನ್ಸ್ ನಂಬಿರುವ ಟೀಮ್ ವರ್ಕ್ ಮತ್ತು ದೃಢತೆಯ ಮೌಲ್ಯಗಳನ್ನು ಅವರು ಇಲ್ಲಿ ಸಾರುತ್ತಾರೆ. ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡುವ ಉತ್ತಮ ಪಾಲುದಾರಿಕೆಗಳನ್ನು ಕೈಗೊಳ್ಳುವ ಬ್ರಾಂಡ್ ನ ಬದ್ಧತೆಯನ್ನು ರಾಹುಲ್ ದ್ರಾವಿಡ್ ಅವರ ಉಪಸ್ಥಿತಿ ಮತ್ತಷ್ಟು ದೃಢಪಡಿಸುತ್ತದೆ.

ರಾಷ್ಟ್ರಾದ್ಯಂತ ಪ್ರಚಾರ
“ಟುಗೆದರ್, ವಿ ಸೋರ್” (ಜೊತೆಯಾಗಿರಿ, ಉನ್ನತಿಗೇರಿ) ಎಂಬ ಈ ಜಾಹೀರಾತು ಪ್ರಚಾರ ಅಭಿಯಾನವು ಮುದ್ರಣ, ಡಿಜಿಟಲ್, ಟಿವಿ, ಸಾಮಾಜಿಕ ಮಾಧ್ಯಮ ಮತ್ತು ಹೊರಾಂಗಣ ವೇದಿಕೆಗಳ ಮೂಲಕ ಪ್ರಸಾರವಾಗಲಿದ್ದು, ಹೆಚ್ಚು ಜನರಿಗೆ ತಲುಪಿಸುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.


ಶ್ರೀರಾಮ್ ಫೈನಾನ್ಸ್ ಸಂಸ್ಥೆಯು ಪ್ರೊ ಕಬಡ್ಡಿ ಲೀಗ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಪಿಕೆಎಲ್ ಸಂದರ್ಭದಲ್ಲಿ ಈ ಜಾಹೀರಾತು ಪ್ರಸಾರವಾಗಲಿದೆ ಮತ್ತು ಕಬಡ್ಡಿ ಪ್ರೇಕ್ಷಕರಿಗೆ ತಲುಪಲಿದೆ. ಮುಂದಿನ ಎರಡು ತಿಂಗಳಲ್ಲಿ ದೇಶದುದ್ದಕ್ಕೂ ಈ ಪ್ರಚಾರ ಜಾಹೀರಾತು ಪ್ರಸಾರವಾಗಲಿದ್ದು, ದೇಶದ ನಗರ, ಗ್ರಾಮೀಣ ಪ್ರದೇಶ ಹೀಗೆ ಎಲ್ಲಾ ಕಡೆಯ ಜನರನ್ನು ತಲುಪಲಿದೆ. ಈ ಮೂಲಕ ಗ್ರಾಹಕರ ಪ್ರತೀ ಆರ್ಥಿಕ ಪ್ರಯಾಣದಲ್ಲಿ ಜೊತೆಯಾಗಿವ ಶ್ರೀರಾಮ್ ಫೈನಾನ್ಸ್ ನ ಬದ್ಧತೆಯನ್ನು ಸಂಸ್ಥೆಯು ಸಾರಲಿದೆ.
ಈ ಕುರಿತು ಮಾತನಾಡಿರುವ ಶ್ರೀರಾಮ್ ಫೈನಾನ್ಸ್‌ ನ ಮಾರ್ಕೆಟಿಂಗ್‌ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ಎಲಿಜಬೆತ್ ವೆಂಕಟರಾಮನ್ ಅವರು, “ಜೊತೆಯಾಗಿ, ಉನ್ನತಿಗೇರಿ’ ಎಂಬ ನಮ್ಮ ಈ ಹೊಸ ಪ್ರಚಾರ ಜಾಹೀರಾತು ಅಭಿಯಾನವು ಪ್ರತಿಯೊಬ್ಬ ಭಾರತೀಯರ ಆಕಾಂಕ್ಷೆಗಳನ್ನು ಪೂರೈಸಲು ನೆರವಾಗುವ ನಮ್ಮ ಭರವಸೆಯ ಸಂಕೇತವಾಗಿ ಮೂಡಿಬಂದಿದೆ. ಫಿಕ್ಸ್ ಡ್ ಡಿಪಾಸಿಟ್ ಆಗಿರಲಿ, ವಾಹನಗಳಿಗೆ ಸಾಲ ಒದಗಿಸುವುದೇ ಆಗಿರಲಿ, ಸಣ್ಣ ಉದ್ಯಮಗಳಿಗೆ ನೆರವಾಗುವುದು ಅಥವಾ ಚಿನ್ನ ಅಥವಾ ಪರ್ಸನಲ್ ಲೋನ್‌ ಗಳನ್ನು ಒದಗಿಸುವುದು ಹೀಗೆ ಸಂಸ್ಥೆಯು ವಿವಿಧ ರೀತಿಯಲ್ಲಿ ಗ್ರಾಹಕರಿಗೆ ತ್ವರಿತವಾಗಿ ಸಹಾಯ ಒದಗಿಸುವ ಕೆಲಸ ಮಾಡುತ್ತಿದೆ. ನಾವು ಈ ಜಾಹೀರಾತನ್ನು ಏಳು ಭಾಷೆಗಳಲ್ಲಿ ಪ್ರಸಾರ ಮಾಡುತ್ತಿದ್ದು, ದೇಶಾದ್ಯಂತ ಇರುವ ಎಲ್ಲಾ ರೀತಿಯ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಿದ್ದೇವೆ” ಎಂದು ಹೇಳಿದರು.
ಈ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ಅವರು ಎಲ್ಲಾ ವರ್ಗದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಲು ಮತ್ತು ಅವರ ಆಸೆಗಳನ್ನು ಪೂರೈಸಿಕೊಳ್ಳಲು ಶ್ರೀರಾಮ್ ಫೈನಾನ್ಸ್‌ ಜೊತೆಗೆ ಪಾಲುದಾರಿಕೆ ಹೊಂದಲು ಪ್ರೋತ್ಸಾಹಿಸುತ್ತಾರೆ. ಭಾರತದ ಆರ್ಥಿಕ ಕ್ಷೇತ್ರವನ್ನು ಪರಿವರ್ತಿಸಲು ಶ್ರೀರಾಮ್ ಫೈನಾನ್ಸ್ ಬದ್ಧವಾಗಿದ್ದು, ಈ ಜಾಹೀರಾತಿನಲ್ಲಿ ಈ ಬದ್ಧತೆಯನ್ನು ತೋರಿಸಿಕೊಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page