ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿರುವ ಅಂತರಂಗದ ಚಾರಣ ಈ ಪುಸ್ತಕ ಪವಿತ್ರ ಕೈಲಾಸದ ಆತೀಯತೆಯನ್ನು ಪರಿಶೀಲಿಸುವುದಲ್ಲದೆ , ನಿಸರ್ಗದಲ್ಲಿನ ದೈವತ್ವದ ಶಕ್ತಿಯನ್ನು ಅನುಭವಿಸಲು ಇಚ್ಛಿಸುವ ಪ್ರತಿಯೊಬ್ಬರೂ ತಪ್ಪದೆ ಓದಬೇಕಾದ ಕೃತಿಯಾಗಿದೆ .
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು ಮತ್ತು
*ಅಂತರಂಗದ ಚಾರಣ* ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು..
ಮೋಹನ್ ರಂಗರಾವ್ ಅವರ ನೂತನ ಕೃತಿ ‘ ಅಂತರಂಗದ ಚಾರಣವನ್ನು ಮೈಸೂರು ಸಾಹಿತ್ಯ ಸಂಭ್ರಮ ( ಮೈಸೂರು ಲಿಟ್ರೇಚರ್ ಫೆಸ್ಟಿವಲ್ ) ದ ಸಹಯೋಗದಲ್ಲಿ ಎಸ್ ಎಲ್ ಬೈರಪ್ಪ ನವರು ಬಿಡುಗಡೆ ಗೊಳಿಸಿ ಆಶೀರ್ವಾದ ನೀಡಿದ್ದು ವಿಶೇಷವಾಗಿತ್ತು..
ಈ ಕೃತಿ ಇಂಗ್ಲಿಷ್ ಮತ್ತು ಕನ್ನಡ ಅಂತರಂಗದ ಚಾರಣ ಭಾಷೆಗಳಲ್ಲಿ ಪ್ರಕಾಶನಗೊಂಡಿದೆಯಲ್ಲದೆ , ಪವಿತ್ರ ಕೈಲಾಸದ ಅತೀಂದ್ರಿಯತೆಯನ್ನು ಪರಿಶೀಲಿಸುತ್ತದೆ . ನಿತ್ಯದಲ್ಲಿ ದೈವತ್ವದ ಶಕ್ತಿಯನ್ನು ಅನುಭವಿಸಲು ಇಚ್ಚಿಸುವ ಪ್ರತಿಯೊಬ್ಬರೂ ತಪ್ಪದೆ ಓದಬೇಕಾದ ಕೃತಿ ಇದಾಗಿದೆ . ಹಿಮಾಲಯದ ಬೆಟ್ಟಗಳೆಡೆಗೆ ಲೇಖಕರ ಪರಿವರ್ತನಾಶೀಲ ಪ್ರಯಾಣವನ್ನು ಅಂತರಂಗದ ಚಾರಣ ಕೃತಿ ಪ್ರಾಮಾಣಿಕವಾಗಿ ಹಂಚಿಕೊಳ್ಳುತ್ತದೆ .
” ಈ ಕೃತಿ ಕೇವಲ ಪ್ರವಾಸ ಕಥನ ಮಾತ್ರವಲ್ಲದೆ , ನಾವು ಹೊಂದಿರುವ ಪ್ರತಿಯೊಂದು ಮೋಹ ಇಂದಾದ ವಿಮೋಚನೆಯ ನಿರೂಪಣೆಯಾಗಿದೆ ,
ತಮ್ಮ ಅನುಭವಗಳನ್ನು ಕುರಿತು ಶ್ರೀ ಭೈರಪ್ಪ ಅವರು ಮಾತನಾಡಿ , “ ಹಿಮಾಲಯಕ್ಕೆ ತಾವು ಕೈಗೊಂಡ ಪ್ರವಾಸ , ತಮ್ಮ ಕಾದಂಬರಿ ‘ ಪರ್ವ’ಕ್ಕೆ ಸ್ಪಷ್ಟವಾದ ಕಲ್ಪನೆ ಮತ್ತು ನಿರ್ದೇಶನವನ್ನು ನೀಡಿದ್ದವು.
ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಿದಾಗ ಲೇಖಕರು ತಮಗೆ ಸ್ಫೂರ್ತಿ ಉಂಟಾಗಬಹುದಾದ ಉನ್ನತ ಸ್ಥಳಗಳಿಗೆ ನಿಜಕ್ಕೂ ಏಕೆ ಹೋಗಬೇಕು ಎನ್ನುವುದರ ಮಹತ್ವ ನನಗೆ ಅರ್ಥವಾಗಿತ್ತು . ಆಗ ನಡೆದ ಘಟನೆಗಳನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ . ಇಲ್ಲಿಯೇ ನನಗೆ ‘ ಪರ್ವ’ದ ಸ್ಪಷ್ಟವಾದ ಕಲ್ಪನೆ ಅಲ್ಲದೆ , ಅದರ ರಚನೆ ಹಾಗೂ ಹರಿವುಗಳು ಲಭಿಸಿದ್ದವು ‘ ಎಂದರು . ತಾವು ಬರೆಯುವ ವಿಷಯ ಕುರಿತಂತೆ ಸಂಪೂರ್ಣವಾದ ದೃಷ್ಟಿಕೋನವನ್ನು ಹೊಂದಲು ಪ್ರತಿ ಲೇಖಕ ಉನ್ನತ ಎತ್ತರಕ್ಕೆ ಹೋಗಬೇಕಾದ ಅಗತ್ಯವಿರುತ್ತದೆ ಎಂದು ತಿಳಿಸಿದರು .
ಕೈಗಾರಿಕೋದ್ಯಮಿಯಾದ ಆರ್ . ಗುರು , ಫ್ರೋಫೆಸರ್ ಶಂಕರ್ ಬೆಲೂರು, ಡಾ. ಶ್ರೀಧರ್ , ಮೈಸೂರು ಸಾಹಿತ್ಯ ಉತ್ಸವದ ಮೇಲ್ವಿಚಾರಕರು ಮತ್ತು ಅಧ್ಯಕ್ಷರಾದ ಶುಭಾ ಸಂಜಯ್ ಅರಸ್ , ರಚಿತಾಮೋಹನ್ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು .