ಸಮಾಜ ಸೇವಕ ಹರ್ಷವರ್ಧನ್ ಗೌಡರಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಮತ್ತೊಂದು ಮಹಾನ್ ಕಾರ್ಯ

ಮಂಡ್ಯ ಜಿಲ್ಲೆ , ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ವಯೋವೃದ್ದೆ ಲಕ್ಕಮ್ಮ ಅವರಿಗೆ ಮಗನಂತೆ ಆಶ್ರಯನೀಡಲು ಮುಂದಾದ ಹರ್ಷವರ್ಧನ್ ಗೌಡ,

ಬೆಳಗೊಳ ಗ್ರಾಮದ ಲಕ್ಮಮ್ಮ ವಾಸವಾಗಿರುವ ಎಂಚಿನ ಮನೆಯು ಸಂಪೂರ್ಣ ಕುಸಿವ ಹಂತದಲ್ಲಿದ್ದು , ಎಂಚುಗಳು ಹಾಳಾಗಿ ಮಳೆ ಬಂದರೆ ಸೋರಿಕೆ ಯಾಗುತ್ತದೆ,

ಲಕ್ಮಮ್ಮ ನವರಿಗೆ ಇಬ್ಬರು ಗಂಡುಮಕ್ಕಳಿದ್ದು ಒಬ್ಬಮಗ ಮೊನ್ನೆ ಮೊನ್ನೆಯಷ್ಟೇ ಅಸುನೀಗಿದ್ದಾರೆ, ಇನ್ನೊಬ್ಬಮಗ ಕೂಡ ಈ ಕೊರೊನಾ ಸಂಧರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ , ಈ ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ಬಾರವಾಗಬಾರದೆಂದು ಲಕ್ಮಮ್ಮ ತನೂ ಬಾಳಿದ ಮನೆಯಲ್ಲೇ ಕೊನೆಯ ದಿನಗಳನ್ನೂ ಕಳೆಯಬೇಕು ಎಂದು ನಿರ್ಧರಿಸಿ, ಎಷ್ಟೇ ಕಷ್ಟವಿದ್ದರು ಅಲ್ಲಿಯೇ ವಾಸವಾಗಿದ್ದಾರೆ ,

ಶಿಥಿಲಗೊಂಡಿರುವ ಮನೆಯನ್ನು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದರು , ಸಮಾಜಸೇವಕ ಸೇವಕ ಹರ್ಷವರ್ಧನ್ ಅವರು ವೃದ್ದೆಯ ಸಂಕಷ್ಟಕ್ಕೆ ಸ್ಪಂದಿಸಿ ಅವರ ಮನೆಯ ಸರಿಪಡಿಸಿಕೊಡಲು ಮುಂದಾಗಿದ್ದು ಲಕ್ಮಮ್ಮರಿಗೆ ಸಾಂತ್ವನ ಹೇಳಿದ್ದಾರೆ ..

ಇಂದಿನಿಂದ ಲಕ್ಮಮ್ಮ ಅವರ ಮನೆಯ ದುರಸ್ತಿ ಕಾರ್ಯ ಪ್ರಾರಂಭವಾಗಲಿದೆ….

ಈ ರೀತಿಯ ಎಷ್ಟೋ ಸಂಗತಿಗಳು ಎಲ್ಲಾ ಗ್ರಾಮದಲ್ಲೂ ಕಾಣ ಸಿಗುತ್ತವೆ , ಅಂತಹ ಸಂಧರ್ಭದಲ್ಲಿ ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು , ಆದರೆ ಅದು ಆಗುತ್ತಿಲ್ಲ ಕೇವಲ ಚುನಾವಣೆ ಸಂಧರ್ಭದಲ್ಲಿ ಮಾತ್ರ ಜನರಿಗೆ ಮುಖ ತೋರಿಸುವ ಜನ ಪ್ರತಿನಿಧಿಗಳು ಆಮೇಲೆ ಆ ಕಡೆ ಸುಳಿಯೋದೇ ಇಲ್ಲ ,

ಈ ರೀತಿಯ ಜನರ ಸಂಕಷ್ಟಕ್ಕೆ ಮರುಗಿ ಸಹಾಯಕ್ಕೆ ಧಾವೀಸುವ ಹೃದಯವಂತ ದಾನಿಗಳು ಬಹಳ ವಿರಳ ಅದರಲ್ಲಿ ಹರ್ಷವರ್ಧನ್ ಗೌಡ ಅವರು ನೊಂದವರಿಗೆ ಆಸರೆ ಯಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ…

Leave a Reply

Your email address will not be published. Required fields are marked *

You cannot copy content of this page