ಈ ವರ್ಷ ನೈರುತ್ಯ ಮುಂಗಾರು ಮಳೆ ಸಾಧಾರಣ

ನವದೆಹಲಿ: ಈ ವರ್ಷ ನೈರುತ್ಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಪರಿಣಾಮ ದೇಶಾದ್ಯಂತ ಶೇ ೯೮ ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಈ ಬಾರಿ ಮಳೆಯ ದೀರ್ಘಾವಧಿ ಸರಾಸರಿ ಪ್ರಮಾಣ (ಲಾಂಗ್ ಪೀರಿಯಡ್ ಆವರೇಜ್-ಎಲ್‌ಪಿಎ) ಶೇ 98ರಷ್ಟು ಇರಲಿದೆ, ಇದರಲ್ಲಿ ಶೇ 5ರಷ್ಟು ಹೆಚ್ಚು ಅಥವಾ ಕಡಿಮೆ ಆಗಬಹುದು – ಹವಾಮಾನ ಇಲಾಖೆ

ಜೂನ್ ತಿಂಗಳಿನಲ್ಲಿ ಕೇರಳ ಕರಾವಳಿಯ ಮೂಲಕ ಭಾರತವನ್ನು ಪ್ರವೇಶಿಸುವ ನೈರುತ್ಯ ಮಾರುತ, ಸೆಪ್ಟೆಂಬರ್ ಅಂತ್ಯದವರೆಗೆ ನಾಲ್ಕು ತಿಂಗಳ ಕಾಲ ಮುಂಗಾರು ಮಳೆಯನ್ನು ತರುತ್ತದೆ. ನಾಲ್ಕು ತಿಂಗಳ ಮಳೆಯ ಪ್ರಮಾಣದ ಮೊದಲ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page