ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ.
ಸ್ಯಾಂಡಲ್ ವುಡ್ ಮಾತ್ರವಲ್ಲ ಎಲ್ಲಾ ಸಿನಿಮಾ ಇಂಡಸ್ಟ್ರಿಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು..
ಅಭಿಮಾನಿಗಳು ಗಿಫ್ಟ್ ಕೊಡುವ ಮೂಲಕ, ಹಚ್ಚೆ ಹಾಕಿಸಿಕೊಳ್ಳುವ ಮೂಲಕ, ಸೈಕಲ್ ರೈಡ್ ಮಾಡುವ ಮೂಲಕ ಅಭಿಮಾನವನ್ನು ಹೊರ ಹಾಕಿದ್ದರು.
ಬಸಯ್ಯ ಎನ್ ನಾಗಯ್ಯನವರ್ ಎನ್ನುವ ಅಭಿಮಾನಿಯೊಬ್ಬ ಕಿಚ್ಚ ಸುದೀಪ್ ಗಾಗಿ ಬೊಂಬೇರಹಳ್ಳಿಯಲ್ಲಿ ಲೈಬ್ರರಿಯೊಂದನ್ನು ಕಟ್ಟಿಸಿ
ಗ್ರಂಥಾಲಯಕ್ಕೆ ಕಿಚ್ಚ ಸುದೀಪ್ ಹೆಸರನ್ನೇ ಇಟ್ಟಿದ್ದಾರೆ. ಇದನ್ನು ಸುದೀಪ್ ಶೇರ್ ಮಾಡಿಕೊಂಡು ಅಭಿಮಾನಿಗೆ ಕೃತಜ್ಞತೆ ಸಲ್ಲಿಸಿದ್ದರು..
ಅದೆ ರೀತಿ ಅಭಿಮಾನದ ಹೆಸರಿನಲ್ಲಿ ಸುದೀಪ್ ಅಭಿಮಾನಿಗಳು ಪ್ರಾಣಿ ಹಿಂಸೆ ಮಾಡುವ ಮೂಲಕ ಅತಿರೇಕದ ವರ್ತನೆ ಕೂಡ ತೋರಿದ್ದು ದುರಂತ..
ಇನ್ನೂ ಕೊಂಚ ವಿಭಿನ್ನವೆನ್ನುವಂತೆ
ಶಿವಮೊಗ್ಗದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಕಿಚ್ಚ ಉಪ್ಪಿಗೌಡ ಸಮರ್ಥ್ ಸ್ನೇಹಿತರೆಲ್ಲ ಸೇರಿ
400 ಅಡಿ ಉದ್ದದ ಬ್ಯಾನರ್ ಕೂಡಾ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ..
ಕಿಚ್ಚ ಸುದೀಪ್ ಅವರು ಯಶಸ್ವಿಯಾಗಿ ಚಿತ್ರರಂಗ ಪ್ರವೇಶಿಸಿ 25 ವರ್ಷಗಳ ಸಂಭ್ರಮಾಚರಣೆಯನ್ನು ಅವರ ಭಾವಚಿತ್ರಗಳನ್ನೊಳಗೊಂಡ ಅತಿ ಉದ್ದದ ಬ್ಯಾನರ್ ನಿರ್ಮಿಸಿ ದಾಖಲೆ ಬರೆದಿದ್ದು..
ಅದನ್ನು ಡ್ರೋಣ್ ಕ್ಯಾಮರಾದಲ್ಲಿ ಸೆರೆಹಿಡಿದು ಅದು ವೈರಲ್ ಆಗಿದೆ..
ಕಿಚ್ಚಸುದೀಪ್ ಅವರ ಅಭಿಮಾನಿಗಳು ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ೨೫ ವರ್ಷ ಪೂರೈಸಿದ್ದ ಖುಷಿಯನ್ನು ಪಟಾಕಿ ಸಿಡಿಸಿ, ೨೦ಕ್ಕೂ ಹೆಚ್ಚು ಕುಂಬಳಕಾಯಿ ಕಾಯಿ ಹೊಡೆದು ಸಂಭ್ರಮಿಸಿದ್ದಾರೆ..