ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯು
ಏಪ್ರಿಲ್ 13 ರಂದು ರಾಜ್ಯದಂತ ನಡೆಯಲಿದ್ದು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್ ರಘುನಾಥ್ ಹಾಗೂ ಜಿಲ್ಲಾ ಪ್ರತಿನಿಧಿ ಅಧಿಕೃತ ಅಭ್ಯರ್ಥಿ ಆರ್ ಎಸ್ ಸತ್ಯ ನಾರಾಯಣ್ ರವರನ್ನು ಬೆಂಬಲಿಸಬೇಕೆಂದು ವಿಪ್ರ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಮನವಿ ಮಾಡಿದರು ಹಾಗೆಯೇ ಭಾಗ್ಯಶ್ರೀ ಭಟ್ ರವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು

ಪತ್ರಕರ್ತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ
ವಿಪ್ರ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಮಾತನಾಡಿ
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಸ್ಥಾನದ ಅಭ್ಯರ್ಥಿ ಆರ್ ರಘುನಾಥರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು ಹಾಗೆಯೇ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ
ಕೆಲವರನ್ನು ರಘುನಾಥ್ ಬೆಂಬಲಿತ ಅಭ್ಯರ್ಥಿಯೆಂದು ಅಪಪ್ರಚಾರ ಮಾಡುತ್ತಿದ್ದಾರೆ ಅದಕ್ಕೆ ವಿಪ್ರಸಮುದಾಯದವರು ಕಿವಿಗೊಡದೆ
ಮೈಸೂರಿನ ರಘುನಾಥ್ ಬೆಂಬಲಿತ ಅಧಿಕೃತ
ಅಭ್ಯರ್ಥಿ ಆರ್ ಎಸ್ ಸತ್ಯ ನಾರಾಯಣ ರವರನ್ನು ಬೆಂಬಲಿಸಬೇಕು ಹಾಗೂ ಇನ್ನೊಂದು ಪ್ರತಿನಿಧಿ ಸ್ಥಾನದ ಅಭ್ಯರ್ಥಿ ಭಾಗ್ಯ ಶ್ರೀ ಭಟ್ ಬೆಂಬಲಿಸಬೇಕೆಂದು ನವೀನ್ ಕುಮಾರ್ ಮನವಿ ಮಾಡಿದರು
ಏಪ್ರಿಲ್ 13ರ ಭಾನುವಾರ ರಾಜ್ಯದಂತ ಏಕಕಾಲಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ನಡೆಯಲಿದ್ದು ಮೈಸೂರಿನ ಕೃಷ್ಣಮೂರ್ತಿ ಪುರಂ ನಲ್ಲಿರುವ ಬಗನಿ ಸೇವಾ ಸಮಾಜದಲ್ಲಿ
ಮತದಾನ ಬೆಳಗೆ 8ರಿಂದ ಸಂಜೆ 4:00ವರಿಗೂ ಮತದಾನ ನಡೆಯಲಿದೆ, ಬ್ರಾಹ್ಮಣ ಬಂಧುಗಳು ತಪ್ಪದೇ ಆಗಮಿಸಿ ಮತದಾನ ಮಾಡುವುದರ ಮೂಲಕ ಬ್ರಾಹ್ಮಣ ಮಹಾಸಭಾ ಸಂಘಟನೆಗೆ ಶಕ್ತಿ ತುಂಬಬೇಕಾಗಿ ಮನವಿ ಮಾಡಿದರು

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿ ಆರ್ ಎಸ್ ಸತ್ಯನಾರಾಯಣ್, ಭಾಗ್ಯಶ್ರೀ ಭಟ್, ಹಿರಿಯ ವಿಪ್ರ ಮುಖಂಡರಾದ ಸಿ ವಿ ಪಾರ್ಥಸಾರಥಿ, ಎಸ್ ಬಿ ವಾಸುದೇವ್ ಮೂರ್ತಿ, ನಾಗಚಂದ್ರ, ರಾಜಕುಮಾರ್, ಜಗದೀಶ್ ಹಾಜರಿದ್ದರು