ಯಶಸ್ವಿಯಾಗಲು ಬೇಕಾದ ಮುಖ್ಯ ಅಂಶವೆಂದರೆ ನಿಮ್ಮ ವರ್ತನೆ. ಅದು ನಿಮ್ಮ ಬೆಳವಣಿಗೆಯನ್ನು ನಿರ್ಧಾರಮಾಡುತ್ತದೆ – ಹೀಗೆಂದವರು ಕುಮಾರ್ ಅರಟ್ಟಿ, ಉಪಾಧ್ಯಕ್ಷರು ಮತ್ತು ಮುಖ್ಯಸ್ಥರು ಹಾಗೂ ಮಾನವ ‘ಸಂಪತ್ ಸಂಪನ್ಮೂಲ ವಿಭಾಗದ ಮುಖ್ಯಸ್ಥರು, ಎ ಪಿ ಎ ಸಿ ಹಾಗೂ ಚೀಫ್ ಪೀಪಲ್ ಆಫೀಸರ್, ಲ್ಯಾಪ್ ಏಶಿಯಾ ಪೆಸಿಫಿಕ್ ಪ್ರೈವೇಟ್ ಲಿಮಿಟೆಡ್, ಸಿಂಗಪೂರ್.
ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿ ಸಿ ಐ ಸಿ) – ಎಸ್ ಡಿ ಎಮ್ ಐ ಎಮ್ ಡಿ ಸೆಂಟರ್ ಫಾರ್ ಮ್ಯಾನೇಜೆಂಟ್ ಎಕ್ಸಲೆನ್ಸ್, ಇವರ ಸಹಯೋಗದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸಿಟ್ಯೂಟ್ ಫಾರ್ ಮ್ಯಾನೇಜೆಂಟ್ ಡೆವಲಪೈಂಟ್ (ಎಸ್ ಡಿ ಎಮ್ ಐ ಎಮ್ ಡಿ) ಸಂಸ್ಥೆಯವರು, ‘ಉದ್ಯಮ 5.0 ರ ಮೂಲಕ ಸುಸ್ಥಿರತೆ ಮತ್ತು ಬೆಳವಣಿಗೆ’ – ಈ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಆಯೋಜಿಸಿದ್ದ ನಾಯಕತ್ವ ಕುರಿತ ಎರಡನೆಯ ಅಂತರರಾಷ್ಟ್ರೀಯ ಸಮ್ಮೇಳನದ ಮುಖ್ಯ ಭಾಷಣ ಮಾಡಿದ ಅವರು, “ಉದ್ಯಮ 5.0 ಅನ್ನು ಐದನೆಯ ಔದ್ಯಮಿಕ ಕ್ರಾಂತಿ ಎಂದೂ ಕರೆಯಬಹುದು. ಅದರ ಪ್ರಕಾರ ಆರ್ಥಿಕ ಅನುಸಂಧಾನವು ಸಾಮಾಜಿಕ ಮೌಲ್ಯ ಹಾಗೂ ಕ್ಷೇಮದ ಕಡೆಗೆ ಬದಲಾಗಿದೆ. ಇದು ಕೈಗಾರಿಕೀಕರಣದ ಹೊಸ ಹಂತವಾಗಿದ್ದು ಮಾನವರು ಮುಂದುವರೆದ ತಂತ್ರಜ್ಞಾನ ಮತ್ತು ಆಧುನಿಕ ಬುದ್ದಿಮತ್ತೆಯಿಂದ ಕೆಲಸ ಮಾಡುವ ರೊಬೋಟ್ ಗಳಿಂದ ಕಾರ್ಯಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧ್ಯ; 2030ರ ವೇಳೆಗೆ ಇರಬಹುದಾದ ಶೇ.85 ರಷ್ಟು ಉದ್ಯೋಗಗಳು ಇನ್ನೂ ಅನ್ವೇಷಣೆಗೊಂಡಿಲ್ಲ; ಆಧುನಿಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ – ಇವುಗಳು ಉದ್ಯೋಗ ಮಾರುಕಟ್ಟೆಗೆ ಮರುರೂಪವನ್ನು ನೀಡುತ್ತಿವೆ” ಎಂದರು.
ಒಬ್ಬ ಉತ್ತಮ ನಾಯಕನಾಗಲು, ಉದ್ಯೋಗಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಅವಶ್ಯಕ. ಅನೇಕ ಡಾಕ್ಟರೇಟ್ ಪದವಿಗಳು ಮತ್ತು ನಾವು ಬರೆಯುವ ಲೇಖನಗಳಿಗೆ ಹೆಚ್ಚು ಮಹತ್ವವಿರುವುದಿಲ್ಲ; ಅವುಗಳು ಶೈಕ್ಷಣಿಕ ಜ್ಞಾನಕ್ಕೆ ಅವಶ್ಯಕವಾದರೂ, ಮಾನವತೆಯ ಬಗ್ಗೆ ಅರಿತುಕೊಳ್ಳಬೇಕು. ಒಂದು ಸಂಸ್ಥೆಗೆ ಅದು ಬೇಕಾದ ಅಂಶವಾಗಿರುತ್ತದೆ. ನಿರ್ವಹಣಾಕಾರ ನಾಯಕನಾಗಲೇಬೇಕೆಂಬುದು ಏನೂ ಇಲ್ಲ. ನಾಯಕನಾಗಲು ಹೆಚ್ಚು ಸಾಮರ್ಥ್ಯ, ಗಮನ ಮತ್ತು ಸಂವೇದನಾಶೀಲತೆ – ಮುಂತಾದ ವಿಷಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ನಾಯಕತ್ವದ ವಿವಿಧ ಆಯಾಮಗಳ ಬಗ್ಗೆ ಉತ್ತಮ ಲೇಖನಗಳನ್ನು ಶಿಕ್ಷಣತಜ್ಞರು ಹಾಗೂ ಉದ್ಯಮ ಕ್ಷೇತ್ರದವರು ಪ್ರಸ್ತುತಪಡಿಸಿದರು. ನಾಯಕತ್ವದ ಬಗ್ಗೆ ಆಳವಾದ ಅರಿವು ಗಳಿಸಲು ಈ ಸಮ್ಮೇಳನವು ಕಾರಣವಾಯಿತು. ಒಂದು ಸಂಸ್ಥೆಯೊಳಗೆ ಪ್ರತಿಭೆಯನ್ನು ಗುರುತಿಸುವ, ಬೆಳೆಸುವ ಬಗ್ಗೆ ಕೂಡ ವಿಚಾರ ವಿನಿಮಯ ನಡೆಯಿತು.