ಮೈಸೂರಿನ ಇಟ್ಟಿಗೆಗೂಡಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಇಂದು ಶ್ರೀಶ್ರೀಶ್ರೀ ಕೈವಾರ ಯೋಗಿ ನಾರಾಯಣಿ
ಯತೀoದ್ರರ ಬಲಿಜ ಬಣಜಿಗ ಸಂಘ ಮೈಸೂರು ಜಿಲ್ಲೆ ಇವರ ವತಿಯಿಂದ ಸತ್ಯನಾರಾಯಣಸ್ವಾಮಿಪೂಜೆ ಹಾಗೂ MBA ಮತ್ತು MA ವ್ಯಾಸಂಗದಲ್ಲಿ ಚಿನ್ನದ ಪದಕ ಪಡೆದ ಶ್ರೀಎಂ.ದರ್ಶನ್,ಕುಮಾರಿ ಎನ್.ಲತಾ ಹಾಗೂ ಸಮಾಶ್ರೀ ರವರುಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಇದೆ ಸಂದರ್ಭದಲ್ಲಿ ಬನ್ನೂರಿನ ಸಮಾಜ ಸೇವಕರು,ಬನ್ನೂರು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ರೋಟರಿ ಸಂಸ್ಥೆಯ ಮಾಜಿಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ವ್ಯಾಸಂಗದಲ್ಲಿ ಚಿನ್ನದ ಪದಕ ಪಡೆದಂತಹ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸೆನೆಟ್ ಸದ್ಯಸರದ
H.A.ವೆಂಕಟೇಶ್,ಸಮಾಜದ ಚಿಂತಕರದ ಗುಬ್ಬಿಗೂಡು ರಮೇಶ್,ಡಯಟ್ ನ ಉಪನಿರ್ದೇಶಕರಾದ ಪುರುಷೋತ್ತಮ್,ಯೋಗಿನಾರಾಯಣಿ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಸುಬ್ಬಯ್ಯ,ದಿ ಬಲಿಜ ಸಂಘoನ ಅಧ್ಯಕ್ಷರಾದ ಯತಿರಾಜ್,ಶಿಕ್ಷಕರಾದ ಕಿತ್ತುರೂ ಕೆ.ಜಿ.ಪ್ರಕಾಶ್,ಜನಾಂಗದ ಮುಖಂಡರುಗಳಾದ ವಿಜಯಕುಮಾರ್,ನಾರಾಯಣ್ಣಪ್ಪ,ಸುರೇಶ್ ರವರು ಸೇರಿದಂತೆ ಅನೇಕರು ಗಣ್ಯರು ಉಪಸ್ಥಿತರಿದ್ದರು.
ಅಂತೇಯೇ ಈ ವೇಳೆ ಕೈವಾರ ಯೋಗಿನಾರಾಯಣಿ
ಯತೀoದ್ರರ ಬಲಿಜ ಸಂಘದ ಅಧ್ಯಕ್ಷರಾದ ಉಮೇಶ್,ಉಪಾಧ್ಯಕ್ಷರಾದ ಮೋಹನ್ ಕುಮಾರ್, ಕಾರ್ಯದರ್ಶಿ ಜಿ.ರಾಮು,ಸಹ ಕಾರ್ಯದರ್ಶಿ ಗೋವರ್ಧನ,ಸಂಘಟನಾ ಕಾರ್ಯದರ್ಶಿ ಲಿಂಗರಾಜು,ಖಜಾಂಚಿ ಶ್ರೀನಿವಾಸ್,ಸಹಖಜಾಂಚಿ ನಾಗರಾಜು,ಬಲಿಜ ಜನಾಂಗದ ಹೇಮಂತ್ ರವರು ಸೇರಿದಂತೆ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಳಿಕ ಈ ಕಾರ್ಯಕ್ರಮ ಕುರಿತು ಗುಬ್ಬಿಗೂಡು ರಮೇಶ್,ಬನ್ನೂರು ಪರಿಸರ ಜಾಗೃತಿ ವೇದಿಕೆಯ
ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ, ಸಂಘದ ಕಾರ್ಯದರ್ಶಿ ಲಿಂಗರಾಜು,ಅಧ್ಯಕ್ಷರಾದ ಉಮೇಶ್,ಮಾಜಿ ಸೆನೆಟ್ ಸದ್ಯಸರದ H.A.ವೆಂಕಟೇಶ್ ರವರುಗಳು ಮಾತನಾಡಿದರು.