ಮೈಸೂರಿನ ಜಯನಗರದ ಶ್ರೀಕೃಷ್ಣದೇವರಾಯ
ರಸ್ತೆಯಲ್ಲಿನ “ದಿ ಬಲಿಜ ಸಂಘo(ರಿ)”ನ ಆವರಣದಲ್ಲಿಂದು “ದಿ ಬಲಿಜ ಸಂಘದ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಮತ್ತು ಮೈಸೂರು ವೃಂದ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚಲನಚಿತ್ರ ಖ್ಯಾತ ಖಳನಾಯಕ ನಟರಾದ ದಿವಂಗತ.ತೂಗುದೀಪ ಶ್ರೀನಿವಾಸ್ ರವರ ಪತ್ನಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮತ್ತು ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ಮೀನಾ ತೂಗುದೀಪ ಶ್ರೀನಿವಾಸ್ ರವರು ಮತ್ತು ಬನ್ನೂರಿನ ಸಮಾಜ ಸೇವಕರು ಹಾಗೂ ಬನ್ನೂರು ಪರಿಸರ ಜಾಗೃತಿ ವೇದಿಕೆಯ
ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ದ್ವಜರೋಹಣ ನಡೆಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪರ್ಚನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇನ್ನು ಈ ಸಂದರ್ಭದಲ್ಲಿ ದಿ ಬಲಿಜ ಸಂಘದ
ಗೌ.ಅಧ್ಯಕ್ಷರಾದ ವಿಜಯ ಸಂಪತ್ ಕುಮಾರ್,
ಅಧ್ಯಕ್ಷರಾದ ಯತಿರಾಜ್,ಉಪಾಧ್ಯಕ್ಷರಾದ ಚಿನ್ನಸ್ವಾಮಿ,ಕಾರ್ಯದರ್ಶಿ ಲಿಂಗರಾಜು,ಜ.ಕಾರ್ಯದರ್ಶಿ ಮಹೇಶ್ ನಾಯ್ಡು,ಖಜಾಂಚಿ ಮಂಜುನಾಥ್,ನಿರ್ದೇಶಕರುಗಳಾದ ಯೋಗೇಶ್,ಹೇಮಂತ್ ಕುಮಾರ್,ಗೋವಿಂದರಾಜ್,ರಾಮಚಂದ್ರ,ದಾಮೋದರ್,ಜಿ.ಮಂಜುನಾಥ್ ರವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಬಳಿಕ ಸಂಘದ
ಗೌರವಾಧ್ಯಕ್ಷರಾದ ಮೀನಾ ತೂಗುದೀಪ ಶ್ರೀನಿವಾಸ್ ರವರು ಮಾತನಾಡಿ ಇಂದು ನಮ್ಮ ಸಂಘದ ಆವರಣದಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದ್ವಜರೋಹಣ ಮತ್ತು ಸುಗಮ ಸಂಗೀತ
ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ಈ ಕನ್ನಡ ರಾಜ್ಯೋತ್ಸವವು ನೆವೆಂಬರ್ ಗೆ ಮಾತ್ರ ಸೀಮಿತವಾಗದೆ ವರ್ಷವಿಡೀ ಆಚರಿಸುವಂತಗಲ್ಲಿ ಎಂದರು.
ಇನ್ನು ಬನ್ನೂರಿನ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಮಾತನಾಡಿ ಇಂದು ಕನ್ನಡ
ರಾಜ್ಯೋತ್ಸವವನ್ನು ಆಚರಿಸುತ್ತಿರುವ ಬಲಿಜ ಸಂಘದವರಿಗೆ ಧನ್ಯವಾದಗಳು ಮತ್ತೆ ನಾಡಿನ ಸಮಸ್ತ ಜನತೆಗೆ, ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.ಈ ಕನ್ನಡ ರಾಜ್ಯೋತ್ಸವವನ್ನು ಕನ್ನಡದ ಹಬ್ಬವನ್ನಾಗಿ ವರ್ಷವಿಡೀ ಎಲ್ಲರು ಆಚರಿಸುವಂತಗಲ್ಲಿ. ಇಂತಹ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.ಇದೆ ವೇಳೆ ದಿ ಬಲಿಜ ಸಂಘoನ ಕಾರ್ಯದರ್ಶಿಯಾದ ಲಿಂಗರಾಜು ರವರು ಸಹ ಮಾತನಾಡಿದರು.
ಅಂತೇಯೇ ಕಾರ್ಯಕ್ರಮದಲ್ಲಿ ಕನ್ನಡದ ಸುಗಮ ಸಂಗೀತವನ್ನು ಮತ್ತು ಬನ್ನೂರಿನ ಶಂಭುರಾಜ್ ರವರಿಂದ ಮಿಮಿಕ್ರಿಯನ್ನು ಪ್ರಸ್ತುತ ಪಡಿಸಲಾಯಿತು.