ಮಡಿಕೇರಿಯ ಸಮೀಪ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು ಕೂದಲೆಳೆ ಅಂತರದಲ್ಲಿ ಬಚಾವಾದ ಚಾಲಕ..
ಸಂಪಾಜೆ ಫಾರೆಸ್ಟ್ ಬಳಿ ಸುಳ್ಯ ದಿಂದ ಸಿದ್ದಾಪುರಕ್ಕೆ ಚಲಿಸುತ್ತಿದ್ದ ಕಾರು ಎದರು ಅಡ್ಡಬಂದ ಜಾನುವಾರಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಸೀದ ಹಳ್ಳದ ಒಳಗೆ ನುಗ್ಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ , ಏರ್ ಬ್ಯಾಗ್ ಓಪನ್ ಆಗಿ ಚಾಲಕ ಪಾರಾದ ಘಟನೆ ನಡೆದಿದೆ
ಅದೆ ಮಾರ್ಗದಲ್ಲಿ ಬರುತ್ತಿದ್ದ ” ಹರ್ಷವರ್ಧನ್ ಗೌಡ ಹಾಸನ್ ” ರವರು ಅಪಘಾತವಾಗಿದ್ದ ಕಾರಿನ ಒಳಗೆ ಸಿಲುಕಿದ್ದ ಚಾಲಕನನ್ನು ಕಾರಿನಿಂದ ಹೊರತಂದು , ಅವರಿಗೆ ಧೈರ್ಯ ಹೇಳಿ ಮಾನವೀಯತೆ ಮೆರೆದಿದ್ದಾರೆ…
ಸಮಯಕ್ಕೆ ಸರಿಯಾಗಿ ತುರ್ತು ಸಂಧರ್ಭದಲ್ಲಿ ಸಹಾಯ ಮಾಡಿದ ಹರ್ಷವರ್ಧನ್ ಅವರಿಗೆ ಧನ್ಯವಾದ ತಿಳಿಸಿದ ಚಾಲಕ ನಿಟ್ಟುಸಿರು ಬಿಟ್ಟಿದ್ದಾನೆ…