ಕೊರೊನಾ ಪಾಸಿಟಿವ್ ಬಂದ್ರು, ಪಾಸಿಟಿವ್ ಮೈಂಡ್ ನಲ್ಲಿ ಕೊರೊನಾವನ್ನೇ ಹೊಡೆದೋಡಿಸಿದ ಅವಿಭಕ್ತ ಕುಟುಂಬ.

ಕೊರೊನಾ ಪಾಸಿಟಿವ್ ಬಂದಿದೆ ಅಂತ ಯೋಚನೆ ಮಾಡೋ ಬದಲು ನಾವು ಎಂತಹ ರೋಗವನ್ನು ಎದರಿಸ ಬಲ್ಲೆವು ಎಂಬ ದೃಡ ವಿಶ್ವಾಸ ನಮ್ಮಲ್ಲಿದ್ದರೆ , ಯಾವ ಮಹಾಮಾರಿನೂ ಏನೂ ಮಾಡೋಕ್ಕಾಗಲ್ಲ ಎಂದು ಕೊರೊನಾ ಗೆದ್ದು ಬಂದ
ಅವಿಭಕ್ತ ಕುಟುಂಬ ಅದು ಎಲ್ಲಿ ಅಂತಿರಾ ಈ ಸ್ಟೋರಿ ನೋಡಿ..

ಇಡಿ ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬಿದೆ , ಜನರು ಬದುಕು ನಡೆಸಲು ಪರದಾಡುವಂತ ಸ್ಥಿತಿ ಎದುರಾಗಿದೆ, ಇನ್ನೂ ಕೊರೊನಾ ಪೀಡಿತರ ಸ್ಥಿತಿಯಂತೂ ಹೇಳತೀರದು, ಇಡೀ ಕುಟುಂಬ ಆತಂಕದಲ್ಲಿ ದಿನ ದೂಡುವಂತಾಗುತ್ತದೆ,

ಈ ರೀತಿ
ಕೊರೊನಾ ಕಪಿಮುಷ್ಠಿಗೆ ಸಿಲುಕಿ ಬಿಡುಗಡೆಯಾದ ಒಂದೇ ಕುಟುಂಬದ ೧೭ ಮಂದಿ ಗುಣಮುಖರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹೌದು ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿರುವ ಅವಿಭಕ್ತ ಕುಟುಂಬ ದೃಡವಿಶ್ವಾಸ,
ಆತ್ಮಸ್ಥೈರ್ಯದಿಂದ ಮನೆಯಲ್ಲೇ ಉಳಿದು ಮಹಾಮಾರಿ ಕೊರೋನಾಗೆ ಸೆಡ್ಡು ಹೊಡೆದು ಗೆದ್ದುಬಂದ ಕುಟುಂಬವು ಇವಾಗ ಎಲ್ಲರಿಗೂ ಮಾದರಿಯಾಗಿದೆ,

ಕೊರೊನಾಗೆ ಹೆದರಬೇಡಿ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುತ್ತಿರುವ ಕುಟುಂಬ
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರ ಸಹೋದರರ ಕುಟುಂಬವಾಗಿದೆ,

ಕಳೆದ ತಿಂಗಳ 24 ರಂದು ಬಡಗಲಪುರ ನಾಗೇಂದ್ರ ರವರ ಸಹೋದರ ಲಿಂಗರಾಜೇಗೌಡ ಎಂಬುವರಿಗೆ ಪಾಸಿಟಿವ್ ಆಗಿತ್ತು,
ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಮನೆಯ ಹದಿನೇಳು ಮಂದಿಗೂ ಮಹಾಮಾರಿ ಕೂರೋನಾ ಒಕ್ಕರಿಸಿತ್ತು,
ಬಡಗಲಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಲೀಂ ಪಾಷಾ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಆತ್ಮಸ್ಥೈರ್ಯ ಹೇಳಿದ್ದರು,
ಪ್ರತಿದಿನ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿ ಧೈರ್ಯ ಹೇಳುತ್ತಿದ್ದ ವೈದ್ಯಾಧಿಕಾರಿ ಡಾ ಅಲೀಮ್ ಪಾಷಾ ,
ವಾಸದ ಮನೆಯಲ್ಲೇ ಹೋಮ್ ಐಸೊಲೇಶನ್ ಮಾಡಲಾಗಿತ್ತು ,

ಇಂದುಹದಿನೇಳು ಮಂದಿಯೂ ಮಹಾಮಾರಿ ಕೊರೊನಾ ದಿಂದ ಗೆದ್ದುಬಂದಿದ್ದಾರೆ.
ಕೊರೊನಾ ಪಾಸಿಟಿವ್ ಬಂದಕೂಡಲೇ ಭಯ ಪಡುವುದು ಬೇಡ ,
ಆತ್ಮಸ್ಥೈರ್ಯದಿಂದ ಎದುರಿಸಿದರೆ ಕೂರೋನಾ ನಮ್ಮನ್ನ ಬಿಟ್ಟು ಓಡಿ ಹೋಗುತ್ತದೆ ಎಂದು ಕೊರೋನಾದಿಂದ ಗೆದ್ದಬಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ..

ಒಟ್ಟಾರೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ನೆಗೆಟಿವ್ ಮೈಂಡ್ ಇಂದ ಹೊರಬಂದು ಎಂತಹ ರೋಗವನ್ನು ಎದುರಿಸಬಲ್ಲೇವು ಎಂಬ ಪಾಸಿಟಿವ್ ಮೈಂಡ್ ಬೆಳಸಿಕೊಂಡರೆ ಯಾವುದೇ ಮಹಾಮಾರಿಯೂ ಏನೂ ಮಾಡಲೂ ಸಾಧ್ಯವಿಲ್ಲ..
ವರದಿ ಲೋಹಿತ್ ಹನುಮಂತಪ್ಪ ಮೈಸೂರು.

Leave a Reply

Your email address will not be published. Required fields are marked *

You cannot copy content of this page