ಒಂದೆ ದೇಹ ಎರಡು ಹೃದಯ-ಎರಡು ಮನಸು, ಎಂದು ಬೇರ್ಪಡಿಸಲಾಗದ ಅಪರೂಪದ ಅವಳಿ ಸಹೋದರರು ಸೋನಾ-ಮೋನಾ

Lohith hanumanthappa.
ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಎಂಬ ಮಾತಿದೆ ಆದರೆ ಈ ಇಬ್ಬರು ಸಹೋದರರಲ್ಲಿ ಆರೀತಿ ಆಗುವುದು ಸಾಧ್ಯವೇ ಇಲ್ಲ..

ಹೌದು, ಪಂಜಾಬ್​​ನಲ್ಲಿ ಸಯಾಮಿ ಅವಳಿಗಳು ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ ಒಂದು ಇವರ ಈ ವಿಶೇಷತೆಯಿಂದ ಹೆಸರಾದರೆ ಮತ್ತೊಂದು ಇವರಲ್ಲಿ ಓರ್ವರು ಸರ್ಕಾರಿ ಹುದ್ದೆ ಪಡೆದುಕೊಂಡಿರುವುದು…

ಅಮೃತಸರದ ಪಿಂಗಲ್ವಾಡದ ನಿವಾಸಿಗಳಾದ ಸಯಾಮಿ ಅವಳಿಗಳಾದ ಸೋನಾ ಮತ್ತು ಮೋನಾ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ.

ಪಿಂಗಲ್ವಾಡ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿರುವ ಇವರು ಬಳಿಕ ಐಟಿಐ ಶಿಕ್ಷಣ ಪಡೆದಿದ್ದಾರೆ.

ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಮೇಲ್ವಿಚಾರಕ ಕೆಲಸವನ್ನು ಪಡೆದಿದ್ದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಪ್ರಮುಖ ವಿಷಯ ಎಂದರೆ ಈ ಇಬ್ಬರೂ ಕೂಡ ಸರ್ಕಾರಿ ಉದ್ಯೋಗ ಪಡೆದಿಲ್ಲ. ಬದಲಾಗಿ ಸೋಹ್ನಾಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ಆದರೆ ಮೋಹ್ನಾ ಕೂಡ ಸೋಹ್ನಾನ ಜತೆ ಕೆಲಸಕ್ಕೆ ಹೋಗಲೇ ಬೇಕಿದೆ. ಯಾಕೆಂದರೆ ಇವರಿಬ್ಬರಗೂ ಇರುವುದು ಬಿಡಿಸಲಾಗದ ನಂಟು.

ಸೋನಾ ಮತ್ತು ಮೋನಾ ಈ ಬಗ್ಗೆ ಮಾತನಾಡಿ, ಈ ಅವಕಾಶ ಮಾಡಿಕೊಟ್ಟ ಪಂಜಾಬ್ ಸರ್ಕಾರ ಮತ್ತು ತಮಗೆ ಶಿಕ್ಷಣ ನೀಡಿ ಈ ಮಟ್ಟಕ್ಕೆ ಬೆಳೆಸಿದ ಪಿಂಗಲ್ವಾಡ ಸಂಸ್ಥೆಗೆ ಧನ್ಯವಾದ ಎಂದಿದ್ದಾರೆ.

ಕಾಲುಗಳು ಮಾತ್ರ ಎರಡು, ಕೈಗಳು ನಾಲ್ಕು, ತಲೆ ಎರಡು: ಸಯಾಮಿ ಅವಳಿಗಳಾದ ಸೋನಾ ಮತ್ತು ಮೋನಾ ಜುಲೈ 14, 2003ರಲ್ಲಿ ಅಮೃತಸರದಲ್ಲಿ ಜನಿಸಿದ್ದಾರೆ. 2 ಹೃದಯ, ಕಿಡ್ನಿ ಮತ್ತು ಸ್ಪೈನಲ್ ಕಾರ್ಡ್‌ಗಳನ್ನು ಹೊಂದಿರುವ ಇವರು, ಕರುಳು, ಮೂತ್ರಕೋಶ ಮತ್ತು ಕಾಲುಗಳನ್ನು ಹಂಚಿಕೊಂಡಿದ್ದಾರೆ.

ಒಬ್ಬರಿಗೆ ನಿದ್ದೆ ಬಂದರೆ ಇನ್ನೊಬ್ಬರು ಎದ್ದಿರಬೇಕು , ಇಬ್ಬರಲ್ಲಿ ಯಾರೆ ಒಬ್ಬರು ಊಟಮಾಡಿದರು ಹೊಟ್ಟೆ ತುಂಬುತ್ತದೆ ಯಾಕೆಂದರೆ ಇಬ್ಬರಿಗೂ ಇರುವುದು ಒಂದೆ ಹೊಟ್ಟೆ , ಇಬ್ಬರಿಗೂ ವಿಭಿನ್ನ ಮನಸ್ಥಿತಿಗಳಿದ್ದು ಆಲೋಚನೆಗಳು ಬೇರೆ ಬೇರೆ,

ಬಾಲ್ಯದಲ್ಲಿಯೇ ತಮ್ಮ ಪಾಲಕರಿಂದ ತಿರಸ್ಕರಿಸಲ್ಪಪಟ್ಟ ಈ ಸಯಾಮಿ ಅವಳಿ ಸಹೋದರರು ದೆಹಲಿಯ ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಆಶ್ರಯದಲ್ಲಿ ಬೆಳೆದಿದ್ದರು. ಪರಸ್ಪರ ದೇಹಗಳನ್ನು ಬೇರ್ಪಡಿಸುವುದು ಮುಂದಿನ ತೊಂದರೆಗೆ ಆಹ್ವಾನ ಎಂದು ಅರಿತ ವೈದ್ಯರು ಇವರಿಬ್ಬರನ್ನೂ ಒಟ್ಟಿಗೆ ಇರಲು ಬಿಟ್ಟಿದ್ದಾರೆ…

ಒಟ್ಟಾರೆ ಪ್ರಕೃತಿಯಲ್ಲಿ ಈ ರೀತಿಯ ಹಲವಾರು ವೈಚಿತ್ರಗಳು ಕಂಡು ಬರುತ್ತವೆ , ವಿಜ್ಞಾನದಲ್ಲಿ ಮನುಷ್ಯ ಏನೇ ಮುಂದುವರೆದರೂ ಪ್ರಕೃತಿಯ ಮುಂದೆ ತಲೆಬಾಗಲೆ ಬೇಕು ..

Leave a Reply

Your email address will not be published. Required fields are marked *

You cannot copy content of this page